ಚಿಕ್ಕಮಗಳೂರು: ಹುಲಿ ಅಂಗಾಂಗ ಮಾರಾಟಕ್ಕೆ ಯತ್ನಿಸುತ್ತಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಕುಂದೂರು ಗ್ರಾಮದ ಸತೀಶ್, ಚಂದ್ರೇಗೌಡ ಬಂಧಿತರು.
ಚಿಕ್ಕಮಗಳೂರು ಹೊರ ವಲಯದ ಮತ್ತಾವರ ಬಳಿ ಹುಲಿ ತಲೆ, ನಾಲ್ಕು ಉಗುರು, ಎರಡು ಹಲ್ಲುಗಳನ್ನು ಮಾರಾಟ ಮಾಡಲು ಯತ್ನಿಸುತ್ತಿರುವ ವಿಚಾರ ತಿಳಿದು DFO ರಮೇಶ್ ಬಾಬು ನೇತೃತ್ವದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ದಾಳಿ ನಡೆಸಿದ್ದಾರೆ. ಈ ವೇಳೆ, ಹುಲಿ ಅಂಗಾಂಗ ಮಾರಾಟ ಮಾಡಲು ಮುಂದಾಗಿದ್ದ ಮೂಡಿಗೆರೆ ತಾಲೂಕಿನ ಕುಂದೂರು ಗ್ರಾಮದ ಸತೀಶ್, ಚಂದ್ರೇಗೌಡ ಎಂಬವರನ್ನು ಬಂಧಿಸಿದ್ದಾರೆ.
ಆರೋಪಿಗಳಿಂದ ಹುಲಿ ತಲೆ, ಹುಲಿ ಉರುಗರು, ಹಲ್ಲು, ಬೈಕ್ ಸೇರಿದಂತೆ ನಾಲ್ಕು ಮೊಬೈಲ್ಗಳನ್ನ ಅರಣ್ಯ ಇಲಾಖೆಯ ಸಿಬ್ಬಂದಿ ವಶಕ್ಕೆ ಪಡೆದಿದ್ದಾರೆ. ಈ ಹಿಂದೆಯೂ ಹುಲಿ ಅಂಗಾಂಗ ಮಾರಾಟ ಮಾಡುವಾಗ ಇಬ್ಬರು ಆರೋಪಿಗಳು ಸಿಕ್ಕಿ ಬಿದ್ದಿದ್ದರು.