ವಾಟ್ಸಾಪ್ ತನ್ನ ಬಳಕೆದಾರರಿಗೆ ಹೊಸ ವೈಶಿಷ್ಟ್ಯವೊಂದನ್ನು ಪ್ರಾರಂಭಿಸಿದೆ. ಇದು ತಮ್ಮ ಸ್ಟೇಟಸ್‌ಗೆ ಡೈರೆಕ್ಟ್ ಆಗಿ ಸಾಂಗ್ ಸೇರಿಸಲು ಅನುವು ಮಾಡಿಕೊಡುತ್ತದೆ. ಈ ವೈಶಿಷ್ಟ್ಯವು ಇನ್ಸ್ಟಾಗ್ರಾಂನಂತೆ ಕಾರ್ಯನಿರ್ವಹಿಸುತ್ತದೆ ಮತ್ತು ಬಳಕೆದಾರರು ತಮ್ಮ ಭಾವನೆಗಳನ್ನು ಮ್ಯೂಸಿಕ್ ಮೂಲಕ ವ್ಯಕ್ತಪಡಿಸಲು ಅನುವು ಮಾಡಿಕೊಡುತ್ತದೆ.
ವಾಟ್ಸಾಪ್ ಮ್ಯೂಸಿಕ್ ಸ್ಟೇಟಸ್ ಅಪ್‌ಡೇಟ್: ವಾಟ್ಸಾಪ್‌ನ ಈ ಹೊಸ ಅಪ್‌ಡೇಟ್ ಅಡಿಯಲ್ಲಿ ಬಳಕೆದಾರರು ಮ್ಯೂಸಿಕ್ ಲೈಬ್ರರಿಯನ್ನು ಪಡೆಯುತ್ತಾರೆ. ಅಲ್ಲಿ ಅವರು ತಮ್ಮ ನೆಚ್ಚಿನ ಹಾಡುಗಳನ್ನು ಆಯ್ಕೆ ಮಾಡಬಹುದು ಮತ್ತು ಅವುಗಳನ್ನು ಸ್ಟೇಟಸ್‌ಗೆ ಹಾಕಿಕೊಳ್ಳವುದು. ಹೆಚ್ಚುವರಿಯಾಗಿ ಈ ವೈಶಿಷ್ಟ್ಯವು ಸ್ಪಾಟಿಫೈ, ಆಪಲ್ ಮ್ಯೂಸಿಕ್ ಮತ್ತು ಇತರ ಸಂಗೀತ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ಗಳೊಂದಿಗೆ ಜೀಡಿಸಬಹುದು. ಬಳಕೆದಾರರಿಗೆ ಆ ಪ್ಲಾಟ್‌ಫಾರ್ಮ್‌ಗಳಿಂದ ನೇರವಾಗಿ ಹಾಡುಗಳನ್ನು ಹಂಚಿಕೊಳ್ಳಲು ಅನುವು ಮಾಡಿಕೊಡುತ್ತದೆ.
ವಾಟ್ಸಾಪ್ ಮ್ಯೂಸಿಕ್ ಸ್ಟೇಟಸ್ ಬಳಸುವುದು ಹೇಗೆ?
ವಾಟ್ಸಾಪ್ ಓಪನ್ ಮಾಡಿ, ಸ್ಟೇಟಸ್ ವಿಭಾಗಕ್ಕೆ ಎಂಟ್ರಿ ಕೊಡಿ..
‘Add Music’ ಅಥವಾ ‘Music Sticker’ ಆಪ್ಶನ್ ಆಯ್ದುಕೊಳ್ಳಿ..
ಲಭ್ಯವಿರುವ ಸಾಂಗ್ಸ್ ಲಿಸ್ಟ್ನಿಂದ ಯಾವುದೇ ಹಾಡನ್ನು ಆಯ್ಕೆಮಾಡಿ ಅಥವಾ ಅದನ್ನು ನಿಮ್ಮ ಪ್ಲೇಪಟ್ಟಿಗೆ ಸೇರಿಸಿ
ಸ್ಟೇಟಸ್‌ಗೆ ಇತರೆ ಎಫೆಕ್ಟ್ಸ್ ಮತ್ತು ಟೆಕ್ಸ್ಟ್ ಸೇರಿಸಿ, ನಂತರ ಶೇರ್ ಮಾಡಿಕೊಳ್ಳಿ..
ಪ್ರಸ್ತುತ ಈ ವೈಶಿಷ್ಟ್ಯವು iOS ಮತ್ತು Android ನ ಬೀಟಾ ಆವೃತ್ತಿಯಲ್ಲಿ ಪರೀಕ್ಷಾ ಹಂತದಲ್ಲಿದೆ. ಶೀಘ್ರದಲ್ಲೇ ಇದನ್ನು ಎಲ್ಲಾ ಬಳಕೆದಾರರಿಗೆ ಬಿಡುಗಡೆ ಮಾಡುವ ನಿರೀಕ್ಷೆಯಿದೆ. ವಾಟ್ಸಾಪ್‌ನ ಈ ಹೊಸ ಅಪ್‌ಡೇಟ್ ಮ್ಯೂಸಿಕ್ ಪ್ರಿಯರಿಗೆ ಉತ್ತಮ ವೈಶಿಷ್ಟ್ಯವಾಗಿದೆ ಎಂದು ಸಾಬೀತುಪಡಿಸುತ್ತದೆ.