Home ಟಾಪ್ ಸುದ್ದಿಗಳು ಎನ್ ಐ ಎ ತನಿಖೆಗೆ ಕೊಟ್ಟು ಆರೋಪ ಸುಳ್ಳಾದರೆ ಯತ್ನಾಳ್ ಏನು ಮಾಡುತ್ತಾರೆ?: ಎಂಬಿ ಪಾಟೀಲ್

ಎನ್ ಐ ಎ ತನಿಖೆಗೆ ಕೊಟ್ಟು ಆರೋಪ ಸುಳ್ಳಾದರೆ ಯತ್ನಾಳ್ ಏನು ಮಾಡುತ್ತಾರೆ?: ಎಂಬಿ ಪಾಟೀಲ್

ಬೆಂಗಳೂರು: ಸಿಎಂ ಸಿದ್ದರಾಮಯ್ಯರವರಿಗೆ ಧಮ್ ಇದ್ದರೆ ಮೌಲ್ವಿ ಪ್ರಕರಣ NIA ಗೆ ವಹಿಸಲಿ ಎಂದು ಬಿಜೆಪಿ ಶಾಸಕ ಯತ್ನಾಳ್ ಸವಾಲ್ ಹಾಕಿದ್ದಕ್ಕೆ ಸಚಿವ ಎಂ.ಬಿ ಪಾಟೀಲ್ ತಿರುಗೇಟು ನೀಡಿದ್ದಾರೆ.ಎನ್ ಐ ಎ ತನಿಖೆಗೆ ಕೊಟ್ಟು ಆರೋಪ ಸುಳ್ಳಾದರೆ ಯತ್ನಾಳ್ ಏನು ಮಾಡುತ್ತಾರೆ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.

ಬಿಜೆಪಿ ಶಾಸಕ ಯತ್ನಾಳ್ ಗಾಳಿಯಲ್ಲಿ ಗುಂಡು ಹಾರಿಸುತ್ತಿದ್ದಾರೆ ಎಂದ ಸಚಿವರು, ತನ್ವೀರ್ ಪೀರಾ ಅವರು ಯಾವ ಉಗ್ರ ಸಂಘಟನೆಯೊಂದಿಗೂ ಸಂಬಂಧ ಹೊಂದಿಲ್ಲ. ಬೇಕಿದ್ದರೆ ಎನ್‌ಐಎ ತನಿಖೆಗೆ ಕೊಡಲಿ. ಯತ್ನಾಳ್ ಹಾಗೂ ತನ್ವೀರ್ ಪೀರಾ ಕುಟುಂಬಸ್ಥರ ಜೊತೆ ಉದ್ಯಮಗಳು ಇದ್ದವು. ಹೋಟೆಲ್ ಹಾಗೂ ಇನ್ನಿತರೆ ಉದ್ಯಮದಲ್ಲಿ ಇವರೊಟ್ಟಿಗೆ ಅನೇಕರು ಪಾಲುದಾರರಾಗಿದ್ದರು. ಯತ್ನಾಳ್ ಸುಖಾ ಸುಮ್ಮನೆ ಆರೋಪ ಮಾಡುತ್ತಿದ್ದಾರೆ ಎಂದು ಸಚಿವ ಎಂ.ಬಿ ಪಾಟೀಲ್ ಹೇಳಿದ್ದಾರೆ. ಒಂದು ವೇಳೆ ಎನ್ ಐ ಎ ತನಿಖೆಗೆ ಕೊಟ್ಟು ಆರೋಪ ಸುಳ್ಳಾದರೆ ಯತ್ನಾಳ್ ಏನು ಮಾಡುತ್ತಾರೆ ಎಂಬುದನ್ನು ಹೇಳಲಿ ಎಂದು ಸವಾಲ್ ಹಾಕಿದ್ದಾರೆ.

Join Whatsapp
Exit mobile version