Home ಟಾಪ್ ಸುದ್ದಿಗಳು ಪಶ್ಚಿಮ ಬಂಗಾಳ ಹಿಂಸಾಚಾರ: ತನಿಖೆಗಾಗಿ ಐವರು ಸದಸ್ಯರ ತಂಡವನ್ನು ರಚಿಸಿದ ನಡ್ಡಾ

ಪಶ್ಚಿಮ ಬಂಗಾಳ ಹಿಂಸಾಚಾರ: ತನಿಖೆಗಾಗಿ ಐವರು ಸದಸ್ಯರ ತಂಡವನ್ನು ರಚಿಸಿದ ನಡ್ಡಾ

ನವದೆಹಲಿ: ಇತ್ತೀಚೆಗೆ ನಡೆದ ನಬನ್ನಾ ಚಲೋ ಮೆರವಣಿಗೆಯಲ್ಲಿ ಪಶ್ಚಿಮ ಬಂಗಾಳದಲ್ಲಿ ನಡೆದ ಹಿಂಸಾಚಾರದ ತನಿಖೆಗಾಗಿ ಭಾರತೀಯ ಜನತಾ ಪಕ್ಷದ (ಬಿಜೆಪಿ) ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಐವರು ಸದಸ್ಯರ ಸಮಿತಿಯನ್ನು ರಚಿಸಿದ್ದಾರೆ.

ಉತ್ತರ ಪ್ರದೇಶದ ಮಾಜಿ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಮತ್ತು ಹಾಲಿ ರಾಜ್ಯಸಭಾ ಸಂಸದ ಬ್ರಿಜ್ ಲಾಲ್, ಮಾಜಿ ಮಾಹಿತಿ ಮತ್ತು ಪ್ರಸಾರ ಸಚಿವ ಮತ್ತು ಲೋಕಸಭಾ ಸಂಸದ ರಾಜ್ಯವರ್ಧನ್ ಸಿಂಗ್ ರಾಥೋಡ್, ಲೋಕಸಭಾ ಸದಸ್ಯ ಅಪರಾಜಿತಾ ಸಾರಂಗಿ, ರಾಜ್ಯಸಭಾ ಸಂಸದ ಸಮೀರ್ ಉಮ್ರಾವ್ ಮತ್ತು ಮಾಜಿ ಸಂಸದ ಸುನಿಲ್ ಜಾಖರ್ ಈ ತಂಡದ ನೇತೃತ್ವ ವಹಿಸಲಿದ್ದಾರೆ.

ಹಿಂಸಾಚಾರದ ವೇಳೆ ಬಿಜೆಪಿ ಕಾರ್ಯಕರ್ತರೇ ಪೊಲೀಸ್ ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿ ವಾಹನಗಳಿಗೆ ಬೆಂಕಿ ಹಚ್ಚುತ್ತಿರುವ ಸಾಕಷ್ಟು ವೀಡಿಯೋ ವೈರಲ್ ಆಗಿದೆ.

Join Whatsapp
Exit mobile version