ಮನಾಮ: ಸಮಾಜದಲ್ಲಿ ತಮ್ಮನ್ನು ವಿವಿಧ ಕ್ಷೇತ್ರಗಳಲ್ಲಿ ಗುರುತಿಸಿಕೊಂಡವರಿಗೆ ಇಂಡಿಯನ್ ಸೋಶಿಯಲ್ ಫೋರಂ ನೀಡುವ ಈ ವರ್ಷದ ಪ್ರಶಸ್ತಿ ವಿಜೇತರನ್ನು ಪ್ರಕಟಿಸಲಾಗಿದೆ.
ಶಿಕ್ಷಣ ಕ್ಷೇತ್ರದಲ್ಲಿ ಸಾಧನೆಗೈದ ಡಾ. ಮುಸ್ತಫಾ ರಜಾ ರಬ್ಬಾನಿ (ಬಿಹಾರ) ಅವರಿಗೆ ಶಿಕ್ಷಣ ತಜ್ಞ ಪ್ರಶಸ್ತಿ, ಸಾಮಾಜಿಕ ಕಾರ್ಯಕರ್ತರಾದ ಜವಾದ್ ಪಾಷಾ (ಕರ್ನಾಟಕ) ಅವರಿಗೆ ಅತ್ಯುತ್ತಮ ಸಾಮಾಜಿಕ ಕಾರ್ಯಕರ್ತ ಪ್ರಶಸ್ತಿ, ಮಾನವೀಯ ಸೇವೆಯಲ್ಲಿ ಅತ್ಯುತ್ತಮ ಕಾರ್ಯನಿರ್ವಹಿಸಿದ ಸಾಬು ಚಿರಮ್ಮೆಲ್ ಮತ್ತು ಫೈಸಲ್ ಪತಂಡಿ (ಕೇರಳ) ಅವರಿಗೆ ಪ್ರಶಸ್ತಿಯನ್ನು ಘೋಷಿಸಲಾಗಿದೆ.
ಅತ್ಯುತ್ತಮ ಬರಹಗಾರ ಪ್ರಶಸ್ತಿಯನ್ನು ಅಬ್ದುಲ್ ಖಯ್ಯೂಮ್ (ತಮಿಳುನಾಡು) ಮತ್ತು ಉದ್ಯಮ ಕ್ಷೇತ್ರದಲ್ಲಿ ಸಾಧನೆಗೈದ ರಿಯಾಝ್ ಬಿ.ಕೆ. (ಕರ್ನಾಟಕ) ಅವರಿಗೆ ಅತ್ಯುತ್ತಮ ಉದ್ಯಮಿ ಪ್ರಶಸ್ತಿಯನ್ನು ಘೋಷಿಸಲಾಗಿದೆ.
ಸೆ.16ರಂದು ಸಂಜೆ 5 ಗಂಟೆಗೆ ಮುಹರ್ರಕ್ ನ ಅಲ್ ಇಸ್ಲಾಹ್ ಸಭಾಂಗಣದಲ್ಲಿ ಇಂಡಿಯನ್ ಸೋಶಿಯಲ್ ಫೋರಂ ಆಯೋಜಿಸಿರುವ ಸ್ವಾತಂತ್ರ್ಯದ ಅಮೃತಮಹೋತ್ಸವ ಅಭಿಯಾನದ ಸಮಾರೋಪ ಸಮಾರಂಭದಲ್ಲಿ ಸಾಧಕರಿಗೆ ಪ್ರಶಸ್ತಿ ಪ್ರದಾನ ನಡೆಯಲಿದೆ ಎಂದು ಇಂಡಿಯನ್ ಸೋಶಿಯಲ್ ಫೋರಂ ಕೇಂದ್ರ ಸಮಿತಿ ಅಧ್ಯಕ್ಷ ಅಲಿ ಅಕ್ಬರ್ ಮತ್ತು ಪ್ರಧಾನ ಕಾರ್ಯದರ್ಶಿ ರಫೀಕ್ ಅಬ್ಬಾಸ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.