Home ಟಾಪ್ ಸುದ್ದಿಗಳು ಪ.ಬಂಗಾಳದಲ್ಲಿ ಬಾಂಬ್ ದಾಳಿ | ಸಚಿವ ಜಾಕೀರ್ ಹುಸೇನ್ ಸಹಿತ 13 ಮಂದಿಗೆ ಗಾಯ

ಪ.ಬಂಗಾಳದಲ್ಲಿ ಬಾಂಬ್ ದಾಳಿ | ಸಚಿವ ಜಾಕೀರ್ ಹುಸೇನ್ ಸಹಿತ 13 ಮಂದಿಗೆ ಗಾಯ

ಮುರ್ಷಿದಾಬಾದ್ : ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ರೈಲು ನಿಲ್ದಾಣದಲ್ಲಿ ನಡೆದ ಬಾಂಬ್ ದಾಳಿಯಲ್ಲಿ, ಪಶ್ಚಿಮ ಬಂಗಾಳ ತೃಣಮೂಲ ಕಾಂಗ್ರೆಸ್ ಸರಕಾರದ ಕಾರ್ಮಿಕ ಸಚಿವ ಜಾಕೀರ್ ಹುಸೇನ್ ಗಂಭೀರವಾಗಿ ಗಾಯಗೊಂಡಿದ್ದಾರೆ.

ಮುರ್ಷಿದಾಬಾದ್ ಜಿಲ್ಲೆಯ ನಿಮ್ತಿತಾ ರೈಲ್ವೆ ನಿಲ್ದಾಣದಲ್ಲಿ ಕಳೆದ ರಾತ್ರಿ ಈ ಘಟನೆ ನಡೆದಿದೆ. ಜಾಕೀರ್ ಹುಸೇನ್ ಕೊಲ್ಕತಾಗೆ ತೆರಳಲು ರಾತ್ರಿ 10 ಗಂಟೆ ಸುಮಾರಿಗೆ ರೈಲು ನಿಲ್ದಾಣಕ್ಕೆ ಬಂದಿದ್ದರು. ಈ ವೇಳೆ ನಿಲ್ದಾಣದ 2ನೇ ಪ್ಲಾಟ್ ಫಾರಂನಲ್ಲಿ ಬಾಂಬ್ ಸ್ಫೋಟಗೊಂಡಿದೆ.

ಸಚಿವ ಜಾಕೀರ್ ಮತ್ತು ಬೆಂಬಲಿಗರನ್ನು ಟಾರ್ಗೆಟ್ ಮಾಡಿಕೊಂಡು ಈ ದಾಳಿ ನಡೆಸಲಾಗಿದೆ. ಘಟನೆಯಲ್ಲಿ ಸಚಿವ ಜಾಕೀರ್ ಹುಸೇನ್ ಸೇರಿದಂತೆ 13 ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸಚಿವರ ಕಾಲು ಮತ್ತು ಕಿಬ್ಬೊಟ್ಟೆಗೆ ಗಾಯಗಳಾಗಿರುವುದಾಗಿ ವರದಿಗಳು ತಿಳಿಸಿವೆ.

Join Whatsapp
Exit mobile version