ಬಜೆಟ್ ಮಂಡನೆ ಮುಕ್ತಾಯ: ಸರ್ಕಾರದ ಆರ್ಥಿಕ ಸ್ಥಿತಿಗತಿ ಕುರಿತು ಶ್ವೇತಪತ್ರ ಹೊರಡಿಸುತ್ತೇವೆ; ನಿರ್ಮಲಾ ಸೀತಾರಾಮನ್

Prasthutha|

ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 2024-25ನೇ ಸಾಲಿನ ಕೇಂದ್ರ ಬಜೆಟ್ ಮಂಡನೆ ಮುಕ್ತಾಯಗೊಳಿಸಿದ್ದು, ಸರ್ಕಾರದ ಆರ್ಥಿಕ ಸ್ಥಿತಿಗತಿ ಕುರಿತು ಸಂಸತ್ತಿನಲ್ಲಿ ಶ್ವೇತಪತ್ರ ಹೊರಡಿಸುತ್ತೇವೆಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಹೇಳಿದ್ದಾರೆ.

- Advertisement -


ಇದು ಮೋದಿ ಸರ್ಕಾರದ 2ನೇ ಅವಧಿಯ ಕೊನೆಯ ಬಜೆಟ್ ಆಗಿದ್ದು, ಚುನಾವಣೆಗೂ ಮುನ್ನ ಮಂಡಿಸಲಿರುವ ಬಜೆಟ್ ಆಗಿರುವುದರಿಂದ ಇದು ಪೂರ್ಣ ಪ್ರಮಾಣದ ಬಜೆಟ್ ಆಗಿರದೆ ಮಧ್ಯಂತರ ಬಜೆಟ್ ಆಗಿದೆ.


ವಿಕಸಿತ ಭಾರತಕ್ಕೆ ರಾಜ್ಯಗಳಲ್ಲಿ ಸುಧಾರಣೆಗಳು ಅನೇಕ ಬೆಳವಣಿಗೆ ಮತ್ತು ಅಭಿವೃದ್ಧಿಯನ್ನು ಸಕ್ರಿಯಗೊಳಿಸುವ ಸುಧಾರಣೆಗಳು ರಾಜ್ಯಗಳಲ್ಲಿ ಅಗತ್ಯವಿದೆ ರಾಜ್ಯ ಸರ್ಕಾರಗಳ ಮೈಲಿಗಲ್ಲು ಸಂಬಂಧಿತ ಸುಧಾರಣೆಗಳನ್ನು ಬೆಂಬಲಿಸಲು ಈ ವರ್ಷ 50 ವರ್ಷಗಳ ಬಡ್ಡಿ ರಹಿತ ಸಾಲವಾಗಿ 75,000 ಕೋಟಿ ರೂಪಾಯಿಗಳನ್ನು ಒದಗಿಸಲು ಪ್ರಸ್ತಾಪಿಸಲಾಗಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

Join Whatsapp
Exit mobile version