ಬೆಂಗಳೂರು : ನಮ್ಮ ರಾಜ್ಯದಲ್ಲಿ ಈ ವರ್ಷದೊಳಗಾಗಿ ಪ್ರತಿಯೊಬ್ಬರಿಗೂ ಕೋವಿಡ್ ಲಸಿಕೆಯ ಒಂದು ಡೋಸನ್ನಾದರೂ ನೀಡುತ್ತೇವೆ. ಕೋವಿಡ್ ನಿಯಂತ್ರಣ ಲಸಿಕೆಯಿಂದ ಮಾತ್ರ ಸಾಧ್ಯ ಎಂದು ಉಪಮುಖ್ಯಮಂತ್ರಿ ಡಾ ಅಶ್ವತ್ಥ ನಾರಾಯಣ್ ಹೇಳಿದ್ದಾರೆ.
ಮಲ್ಲೇಶ್ವರಂನ ಬಿಜೆಪಿಯ ಕಾರ್ಯಾಲಯದಲ್ಲಿ ನಡೆದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಯಾವುದೇ ದೇಶಗಳಲ್ಲಿ ಮಾಡದ ವ್ಯವಸ್ಥೆ ನಮ್ಮ ದೇಶದಲ್ಲಿ ಮಾಡುವ ಶಕ್ತಿ ನಮಗಿದೆ. ಮೂಲಭೂತ ಕೊರತೆಗಳ ಮಧ್ಯೆ ಸಮರ್ಪಕವಾಗಿ ನಿರ್ವಹಣೆ ನಮ್ಮ ದೇಶದಲ್ಲಿ ಮಾಡಲಾಗುತ್ತಿದೆ. ಸುಮ್ಮನೆ ಬೆರಳು ತೋರಿಸುವುದನ್ನು ಬಿಡಬೇಕು. ರಾಜ್ಯದಲ್ಲಿ 500 ಆಕ್ಸಿಜನ್ ಜನರೇಟರ್ ವ್ಯವಸ್ಥೆ ಮಾಡುತ್ತೇವೆ. ಬ್ಲಾಕ್ ಫಂಗಸ್ ಮೊದಲಿನಿಂದಲೇ ಇರುವಂತಹ ಕಾಯಿಲೆ. ಕೋವಿಡ್ ಬಂದ ಬಳಿಕ ಇರುವಂತಹ ಕಾಯಿಲೆಯಲ್ಲ. ನಮ್ಮ ಬೇಡಿಕೆಯನ್ನು 14 ನೇ ತಾರೀಕಿನಂದು ಸಲ್ಲಿಸಿದ್ದೇವೆ. ಎಲ್ಲಾ ಕ್ರಮವನ್ನು ವಹಿಸಿದ್ದೇವೆ. ಸಮಸ್ಯೆಯಾಗದಂತೆ ಎಲ್ಲಾ ಮಟ್ಟಿನಲ್ಲೂ ಪ್ರಯತ್ನ ಮಾಡುತ್ತಿದ್ದೇವೆ. ಕೇಂದ್ರ ಸರಕಾರವು ನಮಗೆ ಭರವಸೆ ನೀಡಿದೆ. ಈ ವರ್ಷದೊಳಗಡೆ ರಾಜ್ಯದ ಪ್ರತಿಯೊಬ್ಬರಿಗೂ ಸಿಂಗಲ್ ಡೋಸ್ ಆದರೂ ಕೊಡುತ್ತೇವೆ. ಕೋವಿಡ್ ನಿಯಂತ್ರಿಸಲು ವ್ಯಾಕ್ಸಿನ್ ನಿಂದ ಮಾತ್ರ ಸಾಧ್ಯ. ರಾಜ್ಯದಲ್ಲಿ ಕೇಳಿರುವುದನ್ನೆಲ್ಲಾ ಸರಕಾರ ನೀಡಲು ಸಿದ್ಧವಿದೆ ಎಂದಿದ್ದಾರೆ.
ಬ್ಲಾಕ್ ಫಂಗಸ್ ಬಗ್ಗೆ ಆತಂಕ ಪಡುವ ಅವಶ್ಯಕತೆಯಿಲ್ಲ. ಆದರೆ ಇದೇ ಔಷಧಿ ಬೇಕು ಎಂದರೆ ನೀಡಲು ಸಾಧ್ಯವಿಲ್ಲ. ಪರಿಹಾರ ಕಂಡುಹಿಡಿಯಲು ಯಾವ ರೀತಿಯಲ್ಲಾದರೂ ನಾವು ಪ್ರಯತ್ನ ಮಾಡಬೇಕು. ಕೋವಿಡ್ ನಿರ್ವಹಿಸಲು ನಾವೆಲ್ಲರೂ ಜೊತೆಯಾಗಿ ಪ್ರಾಮಾಣಿಕ ಪ್ರಯತ್ನ ಮಾಡಬೇಕು. ತಜ್ಞರು ಸಲಹೆಗಳನ್ನು ನೀಡಿ ಯಾವ ರೀತಿಯಲ್ಲೆಲ್ಲಾ ಕೋವಿಡ್ ನಿರ್ವಹಿಸಬೇಕೆಂದು ತಿಳಿಸಿದರೆ ಅದನ್ನು ಸ್ವೀಕರಿಸುತ್ತೇವೆ. ಪೆನ್ಸನ್ ಬರದೇ ಇರುವವರಿಗೆ ಆದಷ್ಟು ಬೇಗ ಪೆನ್ಸನ್ ನೀಡುವ ವ್ಯವಸ್ಥೆ ಮಾಡುತ್ತೇವೆ ಎಂದು ಅಶ್ವತ್ಥ ನಾರಾಯಣ್ ಹೇಳಿದ್ದಾರೆ.