Home ರಾಜ್ಯ ತೆನೆಹೊತ್ತ ಮಹಿಳೆಗೆ ಕಮಲ ಎಂದು ನಾಮಕರಣ ಮಾಡಿದ್ದೇವೆ: ಪ್ರಜ್ವಲ್ ರೇವಣ್ಣ

ತೆನೆಹೊತ್ತ ಮಹಿಳೆಗೆ ಕಮಲ ಎಂದು ನಾಮಕರಣ ಮಾಡಿದ್ದೇವೆ: ಪ್ರಜ್ವಲ್ ರೇವಣ್ಣ

ಹಾಸನ: ತೆನೆಹೊತ್ತ ಮಹಿಳೆಗೆ ಕಮಲ ಎಂದು ಹೊಸದಾಗಿ ನಾಮಕರಣ ಮಾಡಿದ್ದೇವೆ ಎಂದು ಎನ್ ಡಿಎ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಹೇಳಿದ್ದಾರೆ.


ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನ ಮಂಚಿಗನಹಳ್ಳಿ ಗ್ರಾಮದಲ್ಲಿ ಮಾತನಾಡಿದ ಅವರು, ಕೆಲವರು ಚುನಾವಣೆಯಲ್ಲಿ ಚಿಹ್ನೆ ಯಾವುದಿರುತ್ತೆ ಅಂತಾ ಕೇಳುತ್ತಿದ್ದರು. ತೆನೆ ಹೊತ್ತ ಮಹಿಳೆ ಚಿಹ್ನೆ ಇರುತ್ತಾ, ಕಮಲ ಇರುತ್ತಾ ಅಂತಾ ಕೇಳುತ್ತಿದ್ದಾರೆ. ಅನುಮಾನ ಗೊಂದಲ ಬೇಡ, ತೆನೆಹೊತ್ತ ಮಹಿಳೆ ನಮ್ಮ ಚಿಹ್ನೆ, ಮಹಿಳೆ ಹೆಸರು ಕಮಲ ಎಂದು ಹೇಳಿದ್ದಾರೆ.


ಲೋಕಸಭಾ ಚುನಾವಣೆ ದೇಶಕ್ಕಾಗಿ ನಡೆಯುತ್ತಿರುವ ಚುನಾವಣೆ. ಅಭಿವೃದ್ಧಿ ವಿಚಾರದಲ್ಲಿ ನಮಗೆ ಯಾರೂ ಸರಿಸಾಟಿಯೇ ಇಲ್ಲ. ಮಾತೆತ್ತಿದ್ದರೆ ಕಾಂಗ್ರೆಸ್ ನಾಯಕರು ರೇವಣ್ಣ ದುರಹಂಕಾರಿ ಅಂತಾರೆ. ರೇವಣ್ಣನವರಿಗೆ ಸ್ವಲ್ಪ ಸಿಟ್ಟು ಜಾಸ್ತಿ, ಆದರೆ ಹೃದಯದಲ್ಲಿ ಪ್ರೀತಿ ಇದೆ ಎಂದಿದ್ದಾರೆ.

Join Whatsapp
Exit mobile version