Home ಟಾಪ್ ಸುದ್ದಿಗಳು ಅಲ್ಪಸಂಖ್ಯಾತರ ರಕ್ಷಣೆ ಹಿಂದೆಯೂ ಮಾಡಿದ್ದೇವೆ, ಮುಂದೆಯೂ ಮಾಡುತ್ತೇವೆ: ಡಿಕೆ ಶಿವಕುಮಾರ್

ಅಲ್ಪಸಂಖ್ಯಾತರ ರಕ್ಷಣೆ ಹಿಂದೆಯೂ ಮಾಡಿದ್ದೇವೆ, ಮುಂದೆಯೂ ಮಾಡುತ್ತೇವೆ: ಡಿಕೆ ಶಿವಕುಮಾರ್

ಗದಗ: ಅಲ್ಪಸಂಖ್ಯಾತರನ್ನು ನಾವು ಮೊದಲಿನಿಂದಲೂ ರಕ್ಷಣೆ ಮಾಡಿಕೊಂಡು ಬಂದಿದ್ದೇವೆ. ಇವತ್ತೂ ಮಾಡುತ್ತೇವೆ, ಮುಂದೆಯೂ ರಕ್ಷಣೆ ಮಾಡುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹೇಳಿದ್ದಾರೆ.

ಈ ಬಗ್ಗೆ ಗದಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂವಿಧಾನ ನಮ್ಮ ಧರ್ಮ. ಹಾಗೂ ರಾಷ್ಟ್ರ ಧ್ವಜ ನಮ್ಮ ಧರ್ಮ. ಹಿಜಾಬ್ ವಿಚಾರದಲ್ಲಿ ಎಲ್ಲರಿಗೂ ಮಾತನಾಡಬೇಡಿ ಎಂದು ಹೇಳಿದ್ದೆವು, ಆದರೆ ನಾನು ಮಾತನಾಡುತ್ತೇನೆ. ಅಲ್ಪಸಂಖ್ಯಾತರ ರಕ್ಷಣೆ ಹಿಂದೆಯೂ ಮಾಡಿದ್ದೇವೆ,ಇನ್ನೂ ಮಾಡುತ್ತೇವೆ ಎಂದು ಹೇಳಿದರು. ಚುನಾವಣೆ ಗಮನದಲ್ಲಿಟ್ಟುಕೊಂಡು ಮೇಕೆದಾಟು ಹೋರಾಟ ಮಾಡಿಲ್ಲ. ಬಿಜೆಪಿಯವರು ನುಡಿದಂತೆ ನಡೆಯುತ್ತಿಲ್ಲಾ. ಮೇಕೆದಾಟು ಹೋರಾಟ ತಡೆಯಲು ಏನೆಲ್ಲಾ ತೊಂದರೆ ಮಾಡಿದ್ದರು. ಕೋರ್ಟ್ ಹೋದರು, ಹೋರಾಟ ನಿಲ್ಲಿಸಲು ಪ್ರಯತ್ನ ಮಾಡಿದರು. ಸದ್ಯದಲ್ಲಿ ಮೇಕೆದಾಟು ಹೋರಾಟ ಆರಂಭ ಮಾಡುತ್ತೇವೆ. ಶಾಸಕಾಂಗ ಸಭೆಯನ್ನು ಕರೆದು ಆದಷ್ಟು ಬೇಗ ಹೋರಾಟ ಆರಂಭ ಮಾಡುತ್ತೇವೆ ಎಂದು ಹೇಳಿದರು.

Join Whatsapp
Exit mobile version