Home ಟಾಪ್ ಸುದ್ದಿಗಳು ‘ನಾವು ಮೊದಲು ಭಾರತೀಯರು’: ಸಿಎಂ ಜಗನ್ ಮೋಹನ್ ರೆಡ್ಡಿಯನ್ನು ಟೀಕಿಸಿದ ಗಾಯಕ ಅದ್ನಾನ್

‘ನಾವು ಮೊದಲು ಭಾರತೀಯರು’: ಸಿಎಂ ಜಗನ್ ಮೋಹನ್ ರೆಡ್ಡಿಯನ್ನು ಟೀಕಿಸಿದ ಗಾಯಕ ಅದ್ನಾನ್

ಮುಂಬೈ:  2022ರ ಟಾಲಿವುಡ್ ಬ್ಲಾಕ್‌ ಬಸ್ಟರ್  ಆರ್‌ ಆರ್‌ ಆರ್‌ ಚಿತ್ರದ ನಾಟು ನಾಟು ಹಾಡಿಗೆ ಗೋಲ್ಡನ್ ಗ್ಲೋಬ್‌ ಪ್ರಶಸ್ತಿ ಲಭಿಸಿರುವುದಕ್ಕೆ ಅಭಿನಂದಿಸಿದ ಆಂಧ್ರ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರನ್ನು  ಗಾಯಕ ಅದ್ನಾನ್ ಸಾಮಿ ಟೀಕಿಸಿದ್ದಾರೆ.

2023ರ ಗೋಲ್ಡನ್ ಗ್ಲೋಬ್ ಪ್ರಶಸ್ತಿ ತೆಲುಗು ಚಿತ್ರಕ್ಕೆ ಸಿಗುವ ಮೂಲಕ ತೆಲುಗು ಧ್ವಜ ಎತ್ತರಕ್ಕೆ ಹಾರುತ್ತಿದೆ. ಆಂಧ್ರದ ಜನತೆ ಪರವಾಗಿ ಚಿತ್ರತಂಡಕ್ಕೆ ನಾನು ಅಭಿನಂದನೆ ಸಲ್ಲಿಸುತ್ತೇನೆ ಎಂದು ಆಂಧ್ರ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರು ಪ್ರಶಸ್ತಿ ಲಭಿಸಿರುವುದಕ್ಕೆ ಚಿತ್ರತಂಡದವರಿಗೆ ಅಭಿನಂದಿಸಿ  ಟ್ವಿಟರ್‌ ನಲ್ಲಿ ಪೋಸ್ಟ್ ಹಾಕಿದ್ದರು.

 ಆದರೆ ಇದಕ್ಕೆ ಟ್ವೀಟ್ ಮಾಡಿದ ಅದ್ನಾನ್ ಸಾಮಿ, ತೆಲುಗು ಧ್ವಜವೇ? ಭಾರತದ ಧ್ವಜವನ್ನು ನೀವು ಅರ್ಥ ಮಾಡಿಕೊಂಡಿದ್ದೀರಾ? ನಾವು ಮೊದಲು ಭಾರತೀಯರು. ನಿಮ್ಮನ್ನು ನೀವು ಪ್ರತ್ಯೇಕಿಸಿಕೊಳ್ಳುವುದನ್ನು ಮೊದಲು ನಿಲ್ಲಿಸಿ. ಅಂತಾರಾಷ್ಟ್ರೀಯವಾಗಿ ನಾವು ಒಂದು ದೇಶ. ಪ್ರತ್ಯೇಕತಾವಾದಿ ವರ್ತನೆಯೇ ಒಂದು ಅನಾರೋಗ್ಯಕರ ಬೆಳವಣಿಗೆ. ಧನ್ಯವಾದಗಳು..ಜೈ ಹಿಂದ್! ಎಂದು ಅದ್ನಾನ್ ಬರೆದುಕೊಂಡಿದ್ದಾರೆ.

Join Whatsapp
Exit mobile version