Home ಕರಾವಳಿ ಮಂಗಳೂರು | ಭಾರೀ ಗಾಂಜಾ ಸಾಗಾಟ ಪ್ರಕರಣ: ಮತ್ತೆ ಇಬ್ಬರು ವೈದ್ಯರ ಬಂಧನ

ಮಂಗಳೂರು | ಭಾರೀ ಗಾಂಜಾ ಸಾಗಾಟ ಪ್ರಕರಣ: ಮತ್ತೆ ಇಬ್ಬರು ವೈದ್ಯರ ಬಂಧನ

ಮಂಗಳೂರು: ಗಾಂಜಾ ಸಾಗಾಟ ಹಾಗೂ ಮಾರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ವೈದ್ಯರು ಮತ್ತು ವೈದ್ಯ ವಿದ್ಯಾರ್ಥಿನಿಯರನ್ನು ಬಂಧಿಸಿದ್ದ ಮಂಗಳೂರು ಪೊಲೀಸರು, ಇಂದು ಮೂವರನ್ನು ವಶಕ್ಕೆ ಪಡೆದಿದ್ದಾರೆ.


ಇದರಲ್ಲಿ ಇಬ್ಬರು ವೈದ್ಯರು ಹಾಗೂ ಮತ್ತೋರ್ವ ಹಣ್ಣಿನ ಅಂಗಡಿಯ ವ್ಯಾಪಾರಿಯಾಗಿದ್ದಾನೆ.


ಪ್ರತಿಷ್ಠಿತ ವೈದ್ಯಕೀಯ ಕಾಲೇಜಿನಲ್ಲಿ ಅಂತಿಮ ವರ್ಷದ Pathology MD ಮಾಡುತ್ತಿರುವ ಡಾ.ಹರ್ಷ ಕುಮಾರ್, D Pharm ವಿದ್ಯಾರ್ಥಿ ಕೇರಳದ ಕೊಚ್ಚಿನ್ ಮೂಲದ ಅಡಾನ್ ದೇವ್ ಮತ್ತು ಮಂಗಳೂರು ಕಸಬ ಬೆಂಗ್ರೆ ನಿವಾಸ ಮುಹಮ್ಮದ್ ಅಫ್ರಾರ್ (23) ಬಂಧಿತ ಆರೋಪಿಗಳು ಎಂದು ಪೊಲೀಸರು ತಿಳಿಸಿದ್ದಾರೆ.


ಇದೇ ಪ್ರಕರಣಕ್ಕೆ ಸಂಬಂಧಿಸಿ ಕೇರಳ ಮೂಲದ ಡಾ ಸಮೀರ್ (32), ಡಾ. ನಾದಿಯಾ ಸಿರಾಜ್ (24), ತಮಿಳುನಾಡಿನ ಡಾ ಮಣಿಮಾರನ್ ಮುತ್ತು (28), ಆಂಧ್ರದ ಡಾ ವರ್ಷಿಣಿ ಪ್ರತಿ (26), ಪಂಜಾಬ್’ನ ಡಾ ಭಾನು ಧಾಹಿಯಾ (27), ಚಂಡಿಘಡದ ಡಾ. ರಿಯಾ ಚಡ್ಡಾ (22), ದೆಹಲಿಯ ಡಾ. ಕ್ಷಿತಿಜ್ ಗುಪ್ತಾ (25), ಮಹಾರಾಷ್ಟ್ರದ ಡಾ ಇರಾ ಬಸಿನ್ (23) ಮತ್ತು ಬಂಟ್ವಾಳ ಮಾರಿಪಳ್ಳದ ಮುಹಮ್ಮದ್ ರವೂಫ್ ಗೌಸ್ (34) ಸೇರಿ ಒಟ್ಟು 10 ಮಂದಿಯನ್ನು ಪೊಲೀಸರು ಬುಧವಾರ ಬಂಧಿಸಿದ್ದರು.

ಈ ಮೂವರು ಬಂಧನದಿಂದ ಪ್ರಕರಣದಲ್ಲಿ ಬಂಧಿತರ  ಸಂಖ್ಯೆ 11ಕ್ಕೆ ಏರಿಕೆಯಾಗಿದ್ದು, ಹೆಚ್ಚಿನ ತನಿಖೆಯನ್ನು ಕೈಗೊಳ್ಳಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಶಶಿಕುಮಾರ್ ತಿಳಿಸಿದ್ದಾರೆ.

ಗಾಂಜಾ ಕೇಸ್​​’ನಲ್ಲಿ ನಾಲ್ವರು ವೈದ್ಯಕೀಯ ವಿದ್ಯಾರ್ಥಿನಿಯರು, ಇಬ್ಬರು ವೈದ್ಯರು, ಇಬ್ಬರು ವೈದ್ಯ ವಿದ್ಯಾರ್ಥಿಗಳು ಹಾಗೂ ಗಾಂಜಾ ಪೆಡ್ಲರ್​’ಗಳು ಸೇರಿ ನಿನ್ನೆ 10 ಮಂದಿಯನ್ನು ಬಂಧಿಸಲಾಗಿತ್ತು.

ಬಂಧಿತ ವೈದ್ಯರು, ವಿದ್ಯಾರ್ಥಿಗಳು ಕೆಎಂಸಿ ಅತ್ತಾವರ, ಕೆಎಂಸಿ ಮಣಿಪಾಲ, ಯೆನಪೋಯಾ ದೇರಳಕಟ್ಟೆ ಮೆಡಿಕಲ್ ಕಾಲೇಜ್​​ನವರಾಗಿದ್ದಾರೆ. ಬಂಧಿತರಿಂದ 2 ಕೆಜಿ‌ ಗಾಂಜಾ, ನಕಲಿ ಪಿಸ್ತೂಲ್, ಡ್ರ್ಯಾಗರ್ ವಶಕ್ಕೆ ಪಡೆದುಕೊಳ್ಳಲಾಗಿದೆ.

ಮಂಗಳೂರಿನ ಬಂಟ್ಸ್ ಹಾಸ್ಟೆಲ್ ವೃತ್ತದ ಸಮೀಪ ಇರುವ ಮೆಂಡಿಸ್ ಪ್ಲಾಜಾ ಎಂಬ ಈ ಅಪಾರ್ಟ್ ಮೆಂಟ್’ನಲ್ಲಿ ಸಾಗರೋತ್ತರ ಭಾರತೀಯ ಪ್ರಜೆಯಾದ ಯನೈಟೆಡ್‌ ಕಿಂಗ್‌’ಡಮ್‌’ನ ನೀಲ್ ಕಿಶೋರಿಲಾಲ್ ರಾಮ್ ಜಿ ಶಾ ಎಂಬಾತ ವಾಸವಿದ್ದು 15 ವರ್ಷಗಳಿಂದ ಮಂಗಳೂರಿನಲ್ಲಿ ನೆಲೆಸಿರುವ ಈತ ಡೆಂಟಲ್‌ ಕಾಲೇಜಿನ ನಾಲ್ಕನೇ ವರ್ಷದ ವಿದ್ಯಾರ್ಥಿಯಾಗಿದ್ದು ಕೋರ್ಸ್‌ ಪೂರ್ಣಗೊಳಿಸಿಲ್ಲ. ಈತ ನಗರದ ಫ್ಲ್ಯಾಟ್‌’ನಲ್ಲಿ ಗಾಂಜಾ ಹೊಂದಿದ್ದ ಬಗ್ಗೆ ಮಾಹಿತಿ ಪಡೆದು ವಿಚಾರಣೆಗೊಳಪಡಿಸಿದಾಗ ಉಳಿದ ಆರೋಪಿಗಳ ಮಾಹಿತಿ ಲಭಿಸಿದೆ.

ಈತ ತನ್ನ ಪ್ಲಾಟ್ ನಲ್ಲಿ ವಿದ್ಯಾರ್ಥಿ- ವಿದ್ಯಾರ್ಥಿನಿಯರಿಗೆ ಗಾಂಜಾ ಮಾರುತ್ತಿದ್ದ ಎನ್ನುವ ಮಾಹಿತಿ ದೊರೆತು ಪ್ಲಾಟ್ ಮೇಲೆ  ದಾಳಿ ಮಾಡಿದಾಗ 2 ಕೆ,ಜಿ ಗಾಂಜಾ ಮತ್ತು ಒಂದು ನಕಲಿ ಪಿಸ್ತೂಲ್ ಹಾಗೂ ಒಂದು ಡ್ಯಾಗರ್ ಸಿಕ್ಕಿತ್ತು. ಈತನನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಡಾಕ್ಟರ್​’ಗಳ ಮುಖವಾಡ ಕಳಚಿಬಿದ್ದಿದೆ.

ಓವರ್ ಸೀಸ್ ಸಿಟಿಜನ್ ಆಫ್ ಇಂಡಿಯಾ ಕೋಟಾ ಆಡಿಯಲ್ಲಿ ಡೆಂಟಲ್ ಕಾಲೇಜಿನಲ್ಲಿ ವಿದ್ಯಬ್ಯಾಸ ಮಾಡುತ್ತಿರುವ ನೀಲ್ ಕಿಶೋರಿಲಾಲ್ ರಾಮ್ ಜಿ ಶಾ, ವೈದ್ಯರಿಗೂ ಗಾಂಜಾ ನೀಡುತ್ತಿದ್ದ ಬಗ್ಗೆ ಬಾಯ್ಬಿಟ್ಟಿದ್ದ. ಆತ ನೀಡಿದ ಮಾಹಿತಿ ಆಧಾರದ ಮೇಲೆ ಮಂಗಳೂರಿನ ಪ್ರತಿಷ್ಠಿತ ಆಸ್ಪತ್ರೆಯಾದ ಕೆ.ಎಂ.ಸಿ ಆಸ್ಪತ್ರೆ ವೈದ್ಯರಾದ ಡಾ.ಸಮೀರ್(32) ಮತ್ತು ಡಾ.ಮಣಿಮಾರನ್ ಮುತ್ತು (28)ನನ್ನು ಬಂಧಿಸಿದ್ದಾರೆ. ಬಳಿಕ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದರು.

Join Whatsapp
Exit mobile version