Home ಟಾಪ್ ಸುದ್ದಿಗಳು ‘ಅಕ್ಬರ್ ದಿ ಗ್ರೇಟ್’ನ ಇನ್ನೊಂದು ಮುಖವನ್ನೂ ನಾವು ಮಕ್ಕಳಿಗೆ ತಿಳಿಸಬೇಕಿದೆ: ಬಿ.ಸಿ ನಾಗೇಶ್

‘ಅಕ್ಬರ್ ದಿ ಗ್ರೇಟ್’ನ ಇನ್ನೊಂದು ಮುಖವನ್ನೂ ನಾವು ಮಕ್ಕಳಿಗೆ ತಿಳಿಸಬೇಕಿದೆ: ಬಿ.ಸಿ ನಾಗೇಶ್

ತುಮಕೂರು: ನಾವು ಮಕ್ಕಳಿಗೆ ಅಕ್ಬರ್ ನ ಇನ್ನೊಂದು ಮುಖವನ್ನು ತಿಳಿಸಿಕೊಡುವ ಅವಶ್ಯಕತೆಯಿದೆ ಎಂದು ಶಿಕ್ಷಣ ಸಚಿವ ಬಿಸಿ ನಾಗೇಶ್ ಹೇಳಿದ್ದಾರೆ. ಇಂದು ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಅಕ್ಬರ್ ದಿ ಗ್ರೇಟ್’ ಎಂದು ಹೇಳುವ ನಾವು ಆತನ ಇನ್ನೊಂದು ಮುಖವನ್ನು ಕೂಡ ನಾವು ಮಕ್ಕಳಿಗೆ ತಿಳಿಸಬೇಕಿದೆ ಎಂದು ಹೇಳಿದ್ದಾರೆ.

ಈ ದೇಶವನ್ನು ಆಳಿದ ಬ್ರಿಟಿಷರು ತಮಗಿಷ್ಟದಂತೆ ಶಿಕ್ಷಣವನ್ನು ಅಳವಡಿಸಿಕೊಂಡರು, ನಾವು ಅದನ್ನು ತಪ್ಪು ಎನ್ನಲು ಸಾಧ್ಯವಿಲ್ಲ ಎಂದರು. ನಾವು ನಿಜ ಹೇಳಿದರೆ ಅದನ್ನು ಕೇಸರೀಕರಣ ಎಂದು ಆರೋಪಿಸುತ್ತಾರೆ, ಅದಕ್ಕೆ ನಾವೇನು ಮಾಡಲು ಆಗುತ್ತೆ ಎಂದು ಪ್ರಶ್ನಿಸಿದರು. ನಮ್ಮ ಸರ್ಕಾರವು ವಿವಿಧ ಸಮುದಾಯದ ಪೀಠಗಳಿಗೆ ಮರ್ಯಾದೆ ಕೊಡುವುದನ್ನು ಮುಂದುವರೆಸಿದೆ. ಅದನ್ನು ಪೀಠಗಳು ಉಳಿಸಿಕೊಂಡು ಹೋಗಬೇಕು ಎಂದು ತಿಳಿಸಿದರು.

ಪಿಎಸ್ಐ ನೇಮಕಾತಿಗೆ ಕುರಿತಾದ ಪ್ರಶ್ನೆಗೆ ಉತ್ತರಿಸಿದ ನಾಗೇಶ್, ಕೇಸಿಗೆ ಸಂಬಂಧಪಟ್ಟಂತೆ ಸಂತೋಷ್ ಎಂಬಾತನನ್ನು ಬಂಧಿಸಲಾಗಿದೆ. ಆತ ಬಿಜೆಪಿ ಕಾರ್ಯಕರ್ತನಾಗಿರುವುದು ನಿಜ ಆದರೆ ಪಕ್ಷ ಯಾವುದೇ ರೀತಿಯ ಜವಾಬ್ದಾರಿ ನೀಡಿಲ್ಲ. ಬಿಜೆಪಿ ಕಾರ್ಯಕರ್ತನಾಗಲು ಒಂದು ಮಿಸ್ ಕಾಲ್ ಹೊಡೆದರೆ ಸಾಕು ಅಷ್ಟೇ. ಮುಂದಿನ ದಿನಗಳಲ್ಲಿ ತನಿಖೆ ಪೂರ್ಣಗೊಂಡು ಸತ್ಯ ಹೊರಬೀಳಲಿದೆ ಎಂದರು.

Join Whatsapp
Exit mobile version