Home ಟಾಪ್ ಸುದ್ದಿಗಳು ವಯನಾಡ್ ಭೂಕುಸಿತ | ಸರ್ಕಾರದ ಅನುಮತಿ ಇಲ್ಲದೇ ಅಭಿಪ್ರಾಯ ಹೇಳುವಂತಿಲ್ಲ: ವಿಜ್ಞಾನಿಗಳಿಗೆ ಕೇರಳ ಸರ್ಕಾರ ನಿರ್ಬಂಧ

ವಯನಾಡ್ ಭೂಕುಸಿತ | ಸರ್ಕಾರದ ಅನುಮತಿ ಇಲ್ಲದೇ ಅಭಿಪ್ರಾಯ ಹೇಳುವಂತಿಲ್ಲ: ವಿಜ್ಞಾನಿಗಳಿಗೆ ಕೇರಳ ಸರ್ಕಾರ ನಿರ್ಬಂಧ

ತಿರುವನಂತಪುರಂ: ವಯನಾಡ್ ಭೂಕುಸಿತದ ಕುರಿತು ತಮ್ಮ ಅಭಿಪ್ರಾಯಗಳನ್ನು ಮತ್ತು ಅಧ್ಯಯನ ವರದಿಗಳನ್ನು ಸರ್ಕಾರದ ಅನುಮತಿ ಇಲ್ಲದೇ ಮಾಧ್ಯಮಗಳೊಂದಿಗೆ ಹಂಚಿಕೊಳ್ಳಬಾರದು ಎಂದು ಕೇರಳ ಸರ್ಕಾರ ವಿಜ್ಞಾನಿಗಳಿಗೆ ನಿರ್ಬಂಧ ಹೇರಿದೆ.


ರಾಜ್ಯ ಪರಿಹಾರ ಆಯುಕ್ತ ಮತ್ತು ವಿಪತ್ತು ನಿರ್ವಹಣೆಯ ಪ್ರಧಾನ ಕಾರ್ಯದರ್ಶಿ ಟಿಕು ಬಿಸ್ವಾಲ್ ಅವರು ಕೇರಳದ ಎಲ್ಲಾ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆಗಳಿಗೆ ವಿಪತ್ತು ಎಂದು ಗುರುತಿಸಲಾಗಿರುವ ವಯನಾಡಿನ ಮೆಪ್ಪಾಡಿ ಪಂಚಾಯತ್ ವ್ಯಾಪ್ತಿಯ ಜಾಗಗಳಿಗೆ ಭೇಟಿ ನೀಡದಂತೆ ನಿರ್ಬಂಧ ಹೇರಿದ್ದಾರೆ.


ರಾಜ್ಯ ಮತ್ತು ದೇಶದಲ್ಲಿರುವ ವಿಜ್ಞಾನಿಗಳು ಈ ಜಲಪ್ರಳಯಕ್ಕೆ ಅರಣ್ಯ ನಾಶ, ಗಣಿಗಾರಿಕೆ, ಹವಾಮಾನ ಬದಲಾವಣೆ ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಂತೆ ಕೇರಳ ಸರ್ಕಾರ ಈ ಮಹತ್ವದ ನಿರ್ಧಾರ ಪ್ರಕಟಿಸಿದೆ. ಸಾಮಾಜಿಕ ಜಾಲತಾಣದಲ್ಲಿ ಈ ಆದೇಶಕ್ಕೆ ಭಾರೀ ಟೀಕೆ ವ್ಯಕ್ತವಾಗುತ್ತಿದ್ದಂತೆ ಕೇರಳ ಸರ್ಕಾರ ಈ ಆದೇಶವನ್ನು ಹಿಂದಕ್ಕೆ ಪಡೆದಿದೆ ಎಂದು ತಿಳಿದು ಬಂದಿದೆ.

Join Whatsapp
Exit mobile version