Home ಟಾಪ್ ಸುದ್ದಿಗಳು ತುಂಬೆ | ಕಾಂಪೌಂಡ್ ಕುಸಿತ, ತಪ್ಪಿದ ಭಾರೀ ಅನಾಹುತ

ತುಂಬೆ | ಕಾಂಪೌಂಡ್ ಕುಸಿತ, ತಪ್ಪಿದ ಭಾರೀ ಅನಾಹುತ

ಬಂಟ್ವಾಳ: ಮಂಗಳೂರು -ಬೆಂಗಳೂರು ರಾಷ್ಟ್ರೀಯ ಹೆದ್ದಾರಿಗೆ ತಾಗಿಕೊಂಡಿರುವ ತುಂಬೆ ಶಾಲೆಯ ಬಳಿ ಶುಕ್ರವಾರ ಮಧ್ಯಾಹ್ನ ಕಾಂಪೌಂಡ್ ಕುಸಿತವಾಗಿದ್ದು, ರಸ್ತೆ ಸಂಚಾರ ಕೆಲಕಾಲ ಸ್ಥಗಿತಗೊಂಡಿತ್ತು.


ಇಂದು ಮಧ್ಯಾಹ್ನ ವೇಳೆ ಹಳೆಯ ಕಟ್ಟದ ಕಾಂಪೌಂಡ್ ಕುಸಿದಿದ್ದು, ಮಣ್ಣು, ಕಲ್ಲು ರಸ್ತೆಯ ಮೇಲೆ ಬಿದ್ದಿದೆ.


ಕಾಂಪೌಂಡ್ ಕುಸಿತದ ವೇಳೆ ರಸ್ತೆಯಲ್ಲಿ ಯಾವುದೇ ವಾಹನ ಸಂಚಾರ ಇಲ್ಲದಿದ್ದ ಕಾರಣ ಸಂಭಾವ್ಯ ಅಪಾಯ ತಪ್ಪಿದೆ. ಸದ್ಯ ಮಣ್ಣು ತೆರವು ಕಾರ್ಯ ಮಾಡಲಾಗುತ್ತಿದೆ.

Join Whatsapp
Exit mobile version