Home ಟಾಪ್ ಸುದ್ದಿಗಳು ವಯನಾಡ್: ಸಿದ್ದರಾಮಯ್ಯ, ಡಿಕೆಶಿ ಭಾವಚಿತ್ರ ಇರುವ 30 ರೇಶನ್ ಕಿಟ್‌ ಗಳು ಜಪ್ತಿ

ವಯನಾಡ್: ಸಿದ್ದರಾಮಯ್ಯ, ಡಿಕೆಶಿ ಭಾವಚಿತ್ರ ಇರುವ 30 ರೇಶನ್ ಕಿಟ್‌ ಗಳು ಜಪ್ತಿ

ವಯನಾಡ್: ವಯನಾಡ್‌ ನಲ್ಲಿ ಪ್ರಿಯಾಂಕಾ ಗಾಂಧಿ, ರಾಹುಲ್ ಗಾಂಧಿ, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಭಾವಚಿತ್ರ ಇರುವ 30 ರೇಶನ್ ಕಿಟ್‌ ಗಳನ್ನು ಜಪ್ತಿ ಮಾಡಲಾಗಿದೆ.

ವಯನಾಡ್ ಲೋಕಸಭೆ ಉಪಚುನಾವಣೆಗೆ 6 ದಿನ ಬಾಕಿ ಇದೆ. ಈ ಕ್ಷೇತ್ರದಲ್ಲಿ ಅಭ್ಯರ್ಥಿಯಾಗಿ ಪ್ರಿಯಾಂಕಾ ಗಾಂಧಿ ಸ್ಪರ್ಧಿಸಿದ್ದಾರೆ. ಅವರ ಚಿತ್ರವಿರುವ ಆಹಾರ ಕಿಟ್‌ ಗಳು ಗುರುವಾರ ಪತ್ತೆಯಾಗಿದ್ದು, ಚುನಾವಣಾ ಆಯೋಗವು ವಶಪಡಿಸಿಕೊಂಡಿದೆ.

ವಯನಾಡಿನ ತೋಲ್ಪೆಟ್ಟಿಯಲ್ಲಿ ಕಾಂಗ್ರೆಸ್‌ ಗೆ ಸೇರಿದ ಆಹಾರ ಕಿಟ್‌ ಗಳು ಸಿಕ್ಕಿದ್ದು, ಇಲ್ಲಿನ ಮನೆಯೊಂದರಲ್ಲಿ ಮತದಾರರಿಗೆ ಹಂಚಲು ಕಿಟ್‌ ಗಳ ಸಿದ್ಧ ಮಾಡಲಾಗುತ್ತಿದೆ ಎಂಬ ಮಾಹಿತಿಯ ಮೇರೆಗೆ ಚುನಾವಣಾ ನಿಯಂತ್ರಣ ತಂಡ ದಾಳಿ ಮಾಡಿದೆ. ತಪಾಸಣೆಯಲ್ಲಿ ಕಾಂಗ್ರೆಸ್ ಮುಖಂಡ ಶಶಿಕುಮಾರ್ ತೋಲ್ಪೆಟ್ಟಿ ಮನೆಯ ಪಕ್ಕದ ಕೊಠಡಿಯಲ್ಲಿ ಈ ಕಿಟ್‌ ಗಳನ್ನು ವಶಪಡಿಸಿಕೊಳ್ಳಲಾಗಿದೆ. ಸುಮಾರು 30 ಆಹಾರ ಕಿಟ್‌ಗಳು ಸಿಕ್ಕಿದ್ದು, ಟೀ ಪುಡಿ, ಸಕ್ಕರೆ, ಅಕ್ಕಿ ಮತ್ತು ಇತರ ದಿನಸಿ ಪದಾರ್ಥಗಳಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Join Whatsapp
Exit mobile version