ಸಿಡ್ನಿ: ವಾಸನೆ ಪತ್ತೆ ಹಚ್ಚುವುದರಲ್ಲಿ ಪ್ರಾಣಿಗಳನ್ನು ಮೀರಿಸುವ ರೋಬೊಟ್ ವೊಂದನ್ನು ಪಶ್ಚಿಮ ಸಿಡ್ನಿ ವಿವಿಯ ವಿಜ್ಞಾನಿಗಳು ಸೃಷ್ಟಿಸಿದ್ದಾರೆ.
ಪಶ್ಚಿಮ ಸಿಡ್ನಿ ವಿವಿಯ ವಿಜ್ಞಾನಿಗಳು ಈ ರೋಬೊಟ್ ಅಭಿವೃದ್ಧಿ ಪಡಿಸಿದ್ದು, ವಾಸನೆಯನ್ನು ಪತ್ತೆ ಹಚ್ಚುವ ಪ್ರಾಣಿಗಳ ಉಳಿವಿಗೆ ಕಾರಣವಾಗಿದೆ.
ಹಲವು ಸಮಸ್ಯೆಗಳಲ್ಲಿ ಪ್ರಾಣಿಗಳನ್ನು ಬಳಸಿ ಮನುಷ್ಯ ಪರಿಹಾರ ಕಂಡಿಕೊಳ್ಳುತ್ತಿದ್ದಾನೆ. ಪ್ರಾಣಿಗಳಿಗಿಂತಲೂ ವೇಗವಾಗಿ ಮತ್ತು ಸರಿಯಾಗಿ ಗುರುತಿಸುವ ಯಂತ್ರವನ್ನು ಅಭಿವೃದ್ಧಿ ಪಡಿಸಿದ್ದೇವೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.
ಪ್ರಾಣಿಗಳಿಗೂ ಗುರುತಿಸಲು ಸಾಧ್ಯವಾಗದ ವಾಸನೆಯ ಮಾರ್ಗವನ್ನು ಈ ಯಂತ್ರ ಪತ್ತೆ ಹಚ್ಚುತ್ತದೆ. ಇದರಿಂದಾಗಿ ದಟ್ಟ ಅರಣ್ಯದಲ್ಲಿ ಕಾಡ್ಗಿಚ್ಚು ಉಂಟಾದರೆ, ಭೂಕುಸಿತದಲ್ಲಿ ಸಿಲುಕಿಕೊಂಡವರನ್ನು ರಕ್ಷಿಸಲು ಹಾಗೂ ಕಳ್ಳರ ಮಾರ್ಗವನ್ನು ಕಂಡುಹಿಡಿಯಲು ಇದು ಬಹಳಷ್ಟು ಪ್ರಯೋಜನಕಾರಿ ಎಂದು ಹೇಳಿದ್ದಾರೆ.