Home ಕರಾವಳಿ ಸುರತ್ಕಲ್ ಕಡಲ ಕಿನಾರೆಯಲ್ಲಿ ತೈಲ ಜಿಡ್ಡು ಪತ್ತೆ: ನೀರಿನ ಮಾದರಿ ತಪಾಸಣೆಗೆ ರವಾನೆ

ಸುರತ್ಕಲ್ ಕಡಲ ಕಿನಾರೆಯಲ್ಲಿ ತೈಲ ಜಿಡ್ಡು ಪತ್ತೆ: ನೀರಿನ ಮಾದರಿ ತಪಾಸಣೆಗೆ ರವಾನೆ

ಮಂಗಳೂರು: ಸುರತ್ಕಲ್‌ ನ ದೊಡ್ಡಕೊಪ್ಪಲು ಕಡಲ ಕಿನಾರೆಯಲ್ಲಿ ಕಂಡು ಬಂದಿರುವ ತೈಲ ಜಿಡ್ಡಿನ ಬಗ್ಗೆ ದ.ಕ.ಜಿಲ್ಲಾಧಿಕಾರಿಯವರ ನೇತೃತ್ವದಲ್ಲಿ ತನಿಖೆ ಆರಂಭವಾಗಿದ್ದು, ನೀರಿನ ಮಾದರಿ ತಪಾಸಣೆಗೆ ರವಾನೆ ಮಾಡಲಾಗಿದೆ.

ಇದೀಗ ಡಿಡಿಎಂಎ, ಎಂಆರ್ ​​ಪಿಎಲ್, ಎಂಇಝಡ್​ ಅಧಿಕಾರಿಗಳೊಂದಿಗೆ ಸ್ಥಳಕ್ಕೆ‌ ಭೇಟಿ‌ ನೀಡಿರುವ ಜಿಲ್ಲಾಧಿಕಾರಿ, ಕಡಲ ಕಿನಾರೆಯಲ್ಲಿ ಪತ್ತೆಯಾಗಿರುವ ತೈಲ ಜಿಡ್ಡು ನೀರಿನ ಮಾದರಿಯನ್ನು ಸಂಗ್ರಹಿಸಿ, ತಪಾಸಣೆಗಾಗಿ ಸಿಎಂಎಫ್ ಆರ್​ ಐಗೆ‌ ಕಳುಹಿಸಲಿದ್ದಾರೆ. ಪತ್ತೆಯಾಗಿರುವ ತ್ಯಾಜ್ಯದ ಪ್ರಾಥಮಿಕ ತನಿಖೆ‌ ನಡೆಸಲಾಗಿದ್ದು, ಅದು ಪಾಚಿಯಂತೆ ಕಂಡು ಬರುತ್ತಿದೆ. ಸಾಮಾನ್ಯ ಮಳೆಗಾಲ ಪ್ರಾರಂಭಕ್ಕಿಂತ ಮೊದಲು ಕಂಡು ಬರುವ ಪಾಚಿಯಂತೆ ಕಂಡು ಬರುತ್ತಿದೆ.

ಹೆಚ್ಚಿನ ಗಾಳಿ ಹಾಗೂ ಅಲೆಗಳ ಘರ್ಷಣೆಯಿಂದ ಕಡಲಿನ ತಳಭಾಗದಲ್ಲಿರುವ ಕೆಸರು ಮೇಲಕ್ಕೆ ಬರುವುದರಿಂದ ಈ ರೀತಿ ಕಾಣಿಸಿಕೊಳ್ಳುತ್ತದೆ. ಆದರೂ ತೈಲ ಮತ್ತು ಗ್ರೀಸ್ ತಪಾಸಣೆಗಾಗಿ ತೈಲ ಜಿಡ್ಡು ನೀರಿನ ಮಾದರಿಯನ್ನು ತಪಾಸಣೆಗೆ ಕಳುಹಿಸಲಾಗಿದೆ. ವರದಿಯನ್ನು ನಿರೀಕ್ಷಿಸಲಾಗುತ್ತಿದೆ ಎಂದು ದ.ಕ ಜಿಲ್ಲಾಧಿಕಾರಿ ಡಾ. ಕೆ.ವಿ ರಾಜೇಂದ್ರ ತಿಳಿಸಿದ್ದಾರೆ.

Join Whatsapp
Exit mobile version