Home ಕರಾವಳಿ ಕಡಬ | ಕಾರು ಏಕಾಏಕಿ ಬೆಂಕಿಗಾಹುತಿ: ನಾಲ್ವರು ಪಾರು

ಕಡಬ | ಕಾರು ಏಕಾಏಕಿ ಬೆಂಕಿಗಾಹುತಿ: ನಾಲ್ವರು ಪಾರು

ಕಡಬ: ಕಾರೊಂದು ಬೆಂಕಿಗಾಹುತಿಯಾದ ಘಟನೆ ಕೊಂಬಾರು ಗ್ರಾಮದ ಪೆರುಂದೋಡಿ ಕಟ್ಟೆ ಎಂಬಲ್ಲಿ ತಡರಾತ್ರಿ ನಡೆದಿದೆ.

ಈ ಕಾರು ಆನಂದ ಗೌಡ ಎಂಬವರಿಗೆ ಸೇರಿದ್ದು, ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಕಾರಿನಲ್ಲಿದ್ದ ಆನಂದ ಗೌಡ, ಮಗು ಸಹಿತ ನಾಲ್ವರು ಕಾರಿನಿಂದ ಇಳಿದು ಪಾರಾಗಿದ್ದಾರೆ.

ತಡರಾತ್ರಿ ಆನಂದ ಗೌಡ ಕುಟುಂಬಸ್ಥರೊಂದಿಗೆ ಕೊಂಬಾರು ಕಟ್ಟೆಯಲ್ಲಿರುವ ಸಂಬಂಧಿಕರ ಮನೆಗೆ ಕಾರಿನಲ್ಲಿ ಹೊರಟಿದ್ದರು. ಇವರು ಪೆರುಂದೋಡಿ ಕಟ್ಟೆ ಸಮೀಪ ತಲುಪಿದಾಗ ಕಾರಿನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದೆ.

Join Whatsapp
Exit mobile version