Home ಟಾಪ್ ಸುದ್ದಿಗಳು ಅಂಬಾನಿ, ಆರೆಸ್ಸೆಸ್ ನಡುವೆ ಡೀಲ್ ಕುದುರಿಸಲು 300 ಕೋಟಿ ಆಫರ್: ಮಾಜಿ ರಾಜ್ಯಪಾಲ ಸತ್ಯಪಾಲ್ ಮಲಿಕ್...

ಅಂಬಾನಿ, ಆರೆಸ್ಸೆಸ್ ನಡುವೆ ಡೀಲ್ ಕುದುರಿಸಲು 300 ಕೋಟಿ ಆಫರ್: ಮಾಜಿ ರಾಜ್ಯಪಾಲ ಸತ್ಯಪಾಲ್ ಮಲಿಕ್ ಸ್ಫೋಟಕ ಹೇಳಿಕೆ

ನವದೆಹಲಿ: ಅಂಬಾನಿ ಮತ್ತು ಆರೆಸ್ಸೆಸ್ ನಾಯಕರ ನಡುವೆ ವ್ಯಾವಹಾರಿಕ ಡೀಲ್ ಕುದುರಿಸಿದರೆ 300 ಕೋಟಿ ರೂ. ಆಫರ್ ನೀಡಲಾಗಿತ್ತು ಎಂಬ ಸ್ಫೋಟಕ ಮಾಹಿತಿಯನ್ನು ಮೇಘಾಲಯ ರಾಜ್ಯಪಾಲ ಸತ್ಯಪಾಲ್ ಮಲಿಕ್ ಆರೋಪಿಸಿದ್ದಾರೆ.

ಜಮ್ಮು ಕಾಶ್ಮೀರದ ರಾಜ್ಯಪಾಲರಾಗಿದ್ದ ಸಂದರ್ಭದಲ್ಲಿ ತಮಗೆ ಈ ಆಫರ್ ನೀಡಲಾಗಿತ್ತು ಎಂದು ತಿಳಿಸಿದ್ದಾರೆ.

2018 ರಲ್ಲಿ ಜಮ್ಮು ಕಾಶ್ಮೀರದ ರಾಜ್ಯಪಾಲರಾಗಿ ಆಯ್ಕೆಯಾದ ಅವರು 2019 ರಲ್ಲಿ ಗೋವಾಕ್ಕೆ ವರ್ಗಾಯಿಸಲಾಗಿತ್ತು.

ಜಮ್ಮು ಕಾಶ್ಮೀರದ ಮುಖ್ಯಮಂತ್ರಿಯಾಗಿ ಆಯ್ಕೆಯಾದ ಸಂದರ್ಭದಲ್ಲಿ ಅಂಬಾನಿ ಮತ್ತು ಆರೆಸ್ಸೆಸ್ ನಾಯಕರೊಬ್ಬರಿಗೆ ಸೇರಿದ 2 ಫೈಲ್ ಸರಿಪಡಿಸಿದರೆ ಫೈಲೊಂದಕ್ಕೆ ತಲಾ 150 ಕೋಟಿಯನ್ನು ನೀಡುವುದಾಗಿ ತಿಳಿಸಲಾಗಿತ್ತು.

ಈ ಸಂದರ್ಭದಲ್ಲಿ ಆ ಎರಡೂ ಫೈಲ್ ಗಳನ್ನು ತಿರಸ್ಕರಿಸಿದೆ ಎಂದು ಸಷ್ಟಪಡಿಸುವ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಸದ್ಯ ಮಾಜಿ ರಾಜ್ಯಪಾಲಕ ಈ ಸ್ಫೋಟಕ ಹೇಳಿಕೆ ರಾಜಕೀಯವಾಗಿ ತೀವ್ರ ಸಂಚಲನ ಮೂಡಿಸಿದೆ.

Join Whatsapp
Exit mobile version