Home ಟಾಪ್ ಸುದ್ದಿಗಳು ಯಾರು ಮತಾಂತರಕ್ಕೆ ಬರುತ್ತಾರೋ ಅವರ ತಲೆ ಕಡಿಯಿರಿ ಎಂದ ಸ್ವಾಮೀಜಿ

ಯಾರು ಮತಾಂತರಕ್ಕೆ ಬರುತ್ತಾರೋ ಅವರ ತಲೆ ಕಡಿಯಿರಿ ಎಂದ ಸ್ವಾಮೀಜಿ

ನವದೆಹಲಿ: ಛತ್ತೀಸಗಡದ ಸರ್ಗುಜಾ ಜಿಲ್ಲೆಯಲ್ಲಿ ಅಕ್ಟೋಬರ್ 1, 2021ರಂದು ಭಾರೀ ಪ್ರತಿಭಟನಾ ಜಾಥಾ ನಡೆಯಿತು. ಹಿಂದೂಗಳನ್ನು ಬಲವಂತವಾಗಿ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ ಮಾಡುತ್ತಿದ್ದಾರೆ ಎಂಬ ಆರೋಪದೊಂದಿಗೆ ಈ ಪ್ರತಿಭಟನೆ ನಡೆಯಿತು.

“ನಾನೊಬ್ಬ ಸಂತ, ನಾನು ಯಾವುದಕ್ಕೂ ಹೆದರುವುದಿಲ್ಲ, ನಿಮಗೆ ಸ್ಪಷ್ಟವಾಗಿ ಹೇಳುತ್ತೇನೆ. ರಾಮ್ ವಿಚಾರ್ ಜೀ ಅದನ್ನೇ ಹೇಳಿದರಾದರೂ ಅದು ಸ್ಪಷ್ಟವಾಗಿರಲಿಲ್ಲ. ಮನೆಯಲ್ಲಿ ಒಂದು ಲಾಠಿ ಇಟ್ಟುಕೊಳ್ಳಿ. ನಮ್ಮ ಊರುಗಳಲ್ಲಿ ಮನೆಗಳಲ್ಲಿ ಕೈಕೊಡಲಿ ಇಟ್ಟುಕೊಂಡಿರುತ್ತಾರೆ. ಅವರು ಏಕೆ ಕೊಡಲಿ ಇಟ್ಟುಕೊಂಡಿರುತ್ತಾರೆ. ನೀವು ಪರಶು ಏಕೆ ಇಟ್ಟುಕೊಂಡಿದ್ದೀರಿ? ಯಾರು ಮತಾಂತರಕ್ಕೆ ಬರುತ್ತಾರೋ ಅವರ ತಲೆ ಕಡಿಯಿರಿ. ನಾನೊಬ್ಬ ಸಂತನಾಗಿರುವಾಗ ನಾನು ದ್ವೇಷ ಹರಡುವ ಭಾಷಣ ಮಾಡುತ್ತೇನೆಂದು ನೀವು ಹೇಗೆ ಹೇಳುತ್ತೀರಿ. ಆದರೆ ಇದೂ ಮುಖ್ಯ, ಕೆಲವೊಮ್ಮೆ ಬೆಂಕಿಯ ಕಿಡಿಯನ್ನು ಉರಿಸಬೇಕಾಗುತ್ತದೆ, ನಾನು ನಿಮಗೆ ಸ್ಪಷ್ಟವಾಗಿ ಹೇಳುತ್ತೇನೆ, ನಿಮ್ಮ ಮನೆಗೆ, ರಸ್ತೆಗೆ, ನೆರೆಹೊರೆಗೆ, ಹಳ್ಳಿಗೆ ಬರುವ ಅಲ್ಪಸಂಖ್ಯಾತರು ಯಾರನ್ನೂ ಕ್ಷಮಿಸಬೇಡಿ.” ಎಂದು ಅವರು ಹೇಳಿದರು.

ಆ ಸ್ವಾಮೀಜಿ ಅಲ್ಲಿಗೆ ನಿಲ್ಲಿಸಲಿಲ್ಲ. ಮತಾಂತರವನ್ನು ಎದುರಿಸಲು ಒಂದು ಸೂತ್ರವನ್ನು ಸಹ ನೀಡಿದರು.

“ಮತಾಂತರ ಮಾಡಿ ಹೋದ ಆ ಕ್ರಿಶ್ಚಿಯನ್ನರಿಗೂ ಹೇಳುತ್ತಿದ್ದೇನೆ. ನೀವು ಸಮುದ್ರವನ್ನು ಬಾವಿಗೇಕೆ ತುಂಬುತ್ತಿದ್ದೀರಿ? ಅವರು ಬಂದಾಗ ಅವರೊಡನೆ ಸಮಾಧಾನದಿಂದ ಮಾತನಾಡಿರಿ. ರೋಕೋ- ನಿಲ್ಲಿಸಿರಿ, ಪಿರ್ ಟೋಕೋ- ಪ್ರತಿಭಟಿಸಿರಿ, ಪಿರ್ ತೋಕೋ- ಗುಂಡಿಡಿ” ಅವರು ಹೇಳಿದರು.

ಇಲ್ಲಿ ಈ ಸಂತ ಪುರೋಹಿತನು ಹಿಂಸೆಗೆ ಕೊಟ್ಟ ಕರೆಯ ಮಾತು ಜನರನ್ನು ಚಿಂತೆಗೆ ದೂಡಿದೆ. ಕ್ರಿಶ್ಚಿಯನ್ನರ ತಲೆ ಕತ್ತರಿಸಿರಿ ಎಂದು ಆತನು ಸಾರ್ವಜನಿಕವಾಗಿ ಹೇಳುವಾಗ ಅಲ್ಲಿ ಪ್ರಭಾವಿ ಬಿಜೆಪಿ ನಾಯಕರಿದ್ದರು. ಛತ್ತೀಸಗಡದ ರಾಮ್ ವಿಚಾರ್ ನೇತಂ, ನಂದಕುಮಾರ್ ಸಾಯಿ, ಬಿಜೆಪಿಯ ವಕ್ತಾರ ಅನುರಾಗ್ ಸಿಂಗ್ ದೇವ್ ಮತ್ತೂ ಹಲವು ಮುಖಂಡರು ಕೂಡ ಇದ್ದರು.

ರಾಷ್ಟ್ರೀಯ ಪರಿಶಿಷ್ಟ ಪಂಗಡಗಳ ಆಯೋಗದ ಅಧ್ಯಕ್ಷ ಹಾಗೂ ಮಾಜಿ ಸಂಸದ ನಂದ ಕಿಶೋರ್ ಸಾಯಿ ಅವರು ಸ್ವಾಮೀಜಿಯ ಮಾತನ್ನು ಅನುಮೋದಿಸಿ ನಗುತ್ತ ಸಂತರ ತಲೆ ತೆಗೆಯಿರಿ ಭಾಷಣಕ್ಕೆ ಚಪ್ಪಾಳೆ ತಟ್ಟಿದ್ದು ಕಂಡುಬಂತು. ಅನಂತರ ಎಲ್ಲ ನಾಯಕರು ಬಿಲ್ಲು ಬಾಣ, ಈಟಿಗಳೊಂದಿಗೆ ಕ್ಯಾಮೆರಾಕ್ಕೆ ಪೋಸು ನೀಡಿದರು.

ಪರಮಾತ್ಮಾನಂದ ಎಂಬ ಈ ಪುರೋಹಿತ ಸಂಸ್ಕೃತ ಮಂಡಳಿಯ ಮುಖ್ಯಸ್ಥರಾಗಿದ್ದವರು. ಛತ್ತೀಸಗಡದ ಹಿಂದುತ್ವ ನಾಯಕರಾದ ಇವರು ಅಲ್ಪಸಂಖ್ಯಾಕರ ವಿರುದ್ಧ ಮಾತನಾಡುವುದರಲ್ಲಿ ಕುಖ್ಯಾತರು. ಪೆಹ್ಲು ಖಾನ್ ರನ್ನು ಕೊಚ್ಚಿ ಕೊಂದ ಘಟನೆಗೆ ಸಂಬಂಧಿಸಿದಂತೆ ಪ್ರಧಾನಿ ಮೋದಿಯವರು ಗೋರಕ್ಷಕರ ಹೆಸರಿನಲ್ಲಿ ಸಮಾಜ ದ್ರೋಹಿಗಳು ಛದ್ಮವೇಷ ಧರಿಸಿ ಓಡಾಡುತ್ತಿದ್ದಾರೆ ಎಂದುದನ್ನು ಈ ಪರಮಾತ್ಮಾನಂದ ಟೀಕಿಸಿದ್ದರು. ಗೋ ಸಾಗಾಣಿಕೆ ಮಾಡುವವರನ್ನು ಕೊಂದವರಿಗೆ ಸರಕಾರ ಸನ್ಮಾನ ಮಾಡಬೇಕು ಎಂದೂ ಅವರು ಹೇಳಿದ್ದರು.

2017ರಲ್ಲಿ ಅವರು ದನ ಕೊಲ್ಲುವವರನ್ನು ಗ್ಲಾಸ್ ಬುಲೆಟ್ ನಿಂದ ಗುಂಡಿಡಬೇಕು ಎಂಬ ಹೇಳಿಕೆ ನೀಡಿದ್ದರು.

ಸರ್ವ ಸನಾತನ ಹಿಂದೂ ರಕ್ಷಾ ಮಂಚ್ ಎಂಬ ಸಂಘಟನೆಯವರು ಬಂದ್ ಕರೋ ಧರ್ಮಾಂತರಣ್ ಎಂದರೆ ಧಾರ್ಮಿಕ ಮತಾಂತರವನ್ನು ನಿಲ್ಲಿಸಿ ಎಂಬ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಕೆಲವು ತಿಂಗಳುಗಳಲ್ಲಿ ಬಿಜೆಪಿಯು ಮತ್ತೆ ಬಲವಂತದ ಮತಾಂತರ ಎಂಬ ವಿಷಯಕ್ಕೆ ಒತ್ತು ಕೊಟ್ಟು ಪ್ರಚಾರ ಮುನ್ನಡೆಸಿದೆ. ಆ ಮೂಲಕ ಹಿಂದುತ್ವ ಶಕ್ತಿಗಳ ಬೆಂಬಲ ಉಳಿಸಿಕೊಳ್ಳುವುದು, ಮತಾಂತರಕ್ಕೆ ಎದುರಾಗಿ ಮತದಾರರನ್ನು ಒಟ್ಟುಗೂಡಿಸುವ ತಂತ್ರ ಇದರಲ್ಲಿ ಅಡಗಿದೆ.

ಈ ಸಂಬಂಧವಾಗಿ ಸುಕ್ಮಾ ಜಿಲ್ಲೆಯ ಸೂಪರಿನ್ ಟೆಂಡೆಂಟ್ ಆಫ್ ಪೋಲೀಸ್ ಅವರು ಎಲ್ಲ ಪೊಲೀಸ್ ಠಾಣೆಗಳಿಗೆ ಸುತ್ತೋಲೆ ಕಳುಹಿಸಿದ್ದಾರೆ. ಎಲ್ಲ ಕ್ರಿಶ್ಚಿಯನ್ ಮಿಶನರಿಗಳ ಮೇಲೆ ಕಣ್ಣಿಡಬೇಕು, ಹಾಗೂ ಕಾನೂನು ಬಾಹಿರ ಧಾರ್ಮಿಕ ಮತಾಂತರವನ್ನು ತಡೆಯಲು ಇತ್ತೀಚೆಗೆ ಮತಾಂತರಗೊಂಡ ಎಲ್ಲ ಬುಡಕಟ್ಟು ಜನರ ವಿವರಗಳನ್ನು ಒಗ್ಗೂಡಿಸಬೇಕು ಎಂದು ಈ ಸುತ್ತೋಲೆಯಲ್ಲಿ ಹೇಳಲಾಗಿದೆ. ಮಾಜೀ ಮುಖ್ಯಮಂತ್ರಿ ಬಿಜೆಪಿಯ ರಮಣ್ ಸಿಂಗ್ ಅವರು ಕಾಂಗ್ರೆಸ್ಸಿನವರನ್ನು ಈ ನಿಟ್ಟಿನಲ್ಲಿ ದೂರುತ್ತ, ಮುಖ್ಯವಾಗಿ ಬಸ್ತಾರ್ ಮತ್ತು ಸರ್ಗುಜಾಗಳಲ್ಲಿ ಹಾಗೂ ಇತರೆಡೆಗಳಲ್ಲಿ ಕಾನೂನು ಬಾಹಿರ ಮತಾಂತರಗಳಿಗೆ ಈಗಿನ ಕಾಂಗ್ರೆಸ್ ಸರಕಾರವು ಬೆಂಬಲ ನೀಡುತ್ತಿದೆ ಎನ್ನುತ್ತಾರೆ.

ಮುಖ್ಯಮಂತ್ರಿ ಬಗೇಲ್ ಅವರು ತೀವ್ರವಾಗಿಯೇ ತಿರುಗೇಟು ನೀಡಿದ್ದಾರೆ. ಬಿಜೆಪಿಯ 15 ವರುಷಗಳ ದುರಾಡಳಿತದಲ್ಲಿ ಅತಿಯಾಗಿ ಜನ ಇವರ ಮೇಲೆ ನಂಬಿಕೆ ಕಳೆದುಕೊಂಡು ಮತಾಂತರಗೊಂಡಿದ್ದಾರೆ.

“ಮಾಧ್ಯಮಗಳು ವರದಿ ಮಾಡಿರುವಂತೆ ಬಿಜೆಪಿಯ ಚಿಂತನ ಶಿಬಿರದಲ್ಲಿ ರಮಣ ಸಿಂಗ್ ಮುಖ್ಯಮಂತ್ರಿಯಾಗಿದ್ದ ಬಿಜೆಪಿಯ 15 ವರ್ಷಗಳ ದುರಾಡಳಿತದ ಬಗ್ಗೆ ಚರ್ಚೆ ನಡೆದಿದೆ. ದಾಖಲೆಗಳೇ ಹೇಳುವಂತೆ ಛತ್ತೀಸಗಡದಲ್ಲಿ ಬಿಜೆಪಿ ಆಡಳಿತಾವಧಿಯಲ್ಲಿ ಹೆಚ್ಚಿನ ಇಗರ್ಜಿಗಳನ್ನು ಕಟ್ಟಲಾಗಿದೆ.” ಎಂದೂ ಬಗೇಲ್ ಹೇಳಿದರು.

“ಬಿಜೆಪಿಗೆ ಗೊತ್ತಿರುವುದು ಒಂದೇ, ಹೇಗೆ ದ್ವೇಷ ಹರಡುವುದು ಎನ್ನುವುದಾಗಿದೆ. ಅದು ಸುಲಭದ ಕೆಲಸ ತಾನೆ? ಸೌಹಾರ್ದವನ್ನು ಗಟ್ಟಿಗೊಳಿಸುವುದು ಕಷ್ಟದ ಕೆಲಸ” ಛತ್ತೀಸಗಡದಲ್ಲಿ ಕಾಂಗ್ರೆಸ್ಸಿನ ಸಂವಹನ ಸಂಪರ್ಕ ವಿಭಾಗದ ಮುಖ್ಯಸ್ಥರಾಗಿರುವ ಸುಶೀಲ್ ಶುಕ್ಲಾ ಹೇಳಿದರು. “ಹೆಚ್ಚಿನ ಚರ್ಚ್ ಗಳು ಬಿಜೆಪಿ ಅಧಿಕಾರಾವಧಿಯಲ್ಲಿ ಕಟ್ಟಲ್ಪಟ್ಟವು” ಎಂಬುದನ್ನು ಅವರು ನೆನಪಿಸುತ್ತಾರೆ.

ಈ ಬಗೆಗೆ ಪೋಲೀಸರಿಗೆ ದೂರು ನೀಡಲಾಗಿದೆಯೇ ಎಂಬ ಪ್ರಶ್ನೆಗೆ ಶುಕ್ಲಾ ಅವರು, “ಹೆಚ್ಚು ಚರ್ಚ್ ಗಳನ್ನು ಕಟ್ಟುವುದು ಕಾನೂನು ಬಾಹಿರವಲ್ಲ. ಪೊಲೀಸರು ಕಾನೂನಿನ ಪರಿಧಿಯಲ್ಲಿ ಕೆಲಸ ಮಾಡುತ್ತಾರೆ. ಬಿಜೆಪಿ ತನ್ನ 15 ವರುಷಗಳ ಭ್ರಷ್ಟ ಅಧಿಕಾರಾವಧಿಯಲ್ಲಿ ಮತಾಂತರದ ಬಗೆಗೆ ಯಾವ ಬಗೆಯ ಕೆಲಸವನ್ನೂ ಮಾಡಿಲ್ಲ. ಸರ್ಗುಜಾ ಜಾಥಾ ಸಭೆಯನ್ನೇ ನೋಡಿ, ಅನುಮತಿ ನೀಡಿ, ಪೋಲಿಸರು ಸಭೆಯ ರಕ್ಷಣೆಯನ್ನಷ್ಟೆ ಮಾಡಿದರು” ಎಂದು ಅವರು ತಿಳಿಸಿದರು.

ಛತ್ತೀಸಗಡದ ಬುಡಕಟ್ಟು ಜನರ ನೆಲೆಗಳು ಕ್ರಿಶ್ಚಿಯನರ ಪ್ರಮಖ ಸ್ಥಳಗಳಾಗಿವೆ. ಅದೇ ವೇಳೆ ಕ್ರಿಶ್ಚಿಯನ್ ವಿರೋಧಿ ಹಿಂದುತ್ವ ಚಳವಳಿಗೂ ಛತ್ತೀಸಗಡ ಗಟ್ಟಿ ನೆಲೆ ಒದಗಿಸಿದೆ. ಉತ್ತರ ಪ್ರದೇಶದಲ್ಲಿ ಸಂಘ ಪರಿವಾರವು ಮುಸ್ಲಿಮರ ತಲೆ ತೆಗೆಯಲು ಹೊರಟಿದ್ದರೆ ಛತ್ತೀಸಗಡದಲ್ಲಿ ಕ್ರಿಶ್ಚಿಯನ್ನರ ತಲೆ ತೆಗೆಯಲು ಪ್ರಯತ್ನಿಸುತ್ತಿದೆ. ಎಲ್ಲವೂ ಅನುಕೂಲ ರಾಜಕೀಯ ಶಾಸ್ತ್ರ.

ಕೊನೆಗೆ ಕರ್ನಾಟಕದ ಮುಖ್ಯಮಂತ್ರಿಯೂ ಸಹ ಕ್ರಿಯೆಗೆ ಪ್ರತಿಕ್ರಿಯೆ ಎನ್ನುವ ಮೂಲಕ ಧಾರ್ಮಿಕ ಹಿಂಸಾಚಾರವನ್ನು ಬೆಂಬಲಿಸಿದರು. ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗವು ಅಲಂಕಾರಿಕವಾಗಿ ಕ್ರಮ ಕೈಗೊಳ್ಳುವ ಮಾತನಾಡುತ್ತದೆಯೇ ಹೊರತು. ಹಿಂಸಾಚಾರವನ್ನು ತೊಡೆಯುವಲ್ಲಿ ವಿಫಲವಾಗಿದೆ. ಸಂಘ ಪರಿವಾರ ಮತ್ತು ಬಿಜೆಪಿಯ ಕಾನೂನು ಜಾರಿ ಅಂಗಗಳು ಕೈ ಜೋಡಿಸಿರುವುದರಿಂದ ತಲೆ ತೆಗೆಯುವ ಮಾತು ಬೇಗ ಕೊನೆಗೊಳ್ಳುವುದಿಲ್ಲ.

(ಕೃಪೆ: ದಿ ವೈರ್)

Join Whatsapp
Exit mobile version