Home ಟಾಪ್ ಸುದ್ದಿಗಳು ಭರತ್ ಶೆಟ್ಟಿಗೆ ಅಡ್ಡೂರು ಗ್ರಾಮದಲ್ಲಿ 826 ಮತಗಳು ನೀಡಿದ್ದು ಪಾಕಿಸ್ತಾನಿಯರೇ?:  ಇನಾಯತ್ ಅಲಿ ಕಿಡಿ

ಭರತ್ ಶೆಟ್ಟಿಗೆ ಅಡ್ಡೂರು ಗ್ರಾಮದಲ್ಲಿ 826 ಮತಗಳು ನೀಡಿದ್ದು ಪಾಕಿಸ್ತಾನಿಯರೇ?:  ಇನಾಯತ್ ಅಲಿ ಕಿಡಿ

►‘ಭರತ್ ಶೆಟ್ಟಿ ಶಾಸಕರಾಗಲು ಅಯೋಗ್ಯರು, ಕ್ಷೇತ್ರದ ಜನತೆಯ ಕ್ಷಮೆ ಯಾಚಿಸಲೇಬೇಕು’

ಮಂಗಳೂರು: ಮಂಗಳೂರು ತಾಲೂಕಿನ ಅಡ್ಡೂರು ಗ್ರಾಮವನ್ನು ಮಿನಿ ಪಾಕಿಸ್ತಾನ ಎಂದಿರುವ ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಭರತ್ ಶೆಟ್ಟಿಗೆ ತಿರುಗೇಟು ನೀಡಿರುವ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ, ಭರತ್ ಶೆಟ್ಟಿಗೆ ಅಡ್ಡೂರು ಗ್ರಾಮದಲ್ಲಿ 826 ಮತಗಳು ನೀಡಿದ್ದು ಪಾಕಿಸ್ತಾನಿಯರೇ? ಎಂದು ಪ್ರಶ್ನಿಸಿದ್ದಾರೆ.

ಮಾಧ್ಯಮ ಪ್ರಕಟನೆ ಮೂಲಕ ಭರತ್ ಶೆಟ್ಟಿ ವಿರುದ್ಧ ವಾಗ್ದಾಳಿ ನಡೆಸಿರುವ ಅವರು, ಭರತ್ ಶೆಟ್ಟಿ ಶಾಸಕರಾಗಲು ಅಯೋಗ್ಯರು ಎನ್ನುವುದನ್ನು ಮತ್ತೊಮ್ಮೆ ಸಾಬೀತು ಪಡಿಸಿದ್ದಾರೆ. ಕ್ಷೇತ್ರದಲ್ಲಿ ಅಭಿವೃದ್ಧಿ ಮಾಡಲು ವಿಫಲರಾಗಿರುವ ಭರತ್ ಶೆಟ್ಟಿ ಸುಲಭದಲ್ಲಿ ಪ್ರಚಾರ ಪಡೆದುಕೊಳ್ಳಲು ಕೀಳು ಮಟ್ಟದ ಮನಸ್ಥಿತಿಯ ಮೊರೆ ಹೋಗಿರುವುದು ದುರಂತ. ಬಿಜೆಪಿಯವರಿಗೆ ಪಾಕಿಸ್ತಾನ ಜಪ‌ ಮಾಡುವುದನ್ನು ಬಿಟ್ಟು ಬೇರೆ ಏನೂ ಮಾಡಲ್ಲ. ಒಬ್ಬ ಜವಾಬ್ದಾರಿಯುತ ಸ್ಥಾನದಲ್ಲಿರುವ ಶಾಸಕ ಭರತ್ ಶೆಟ್ಟಿ, ಅಡ್ಡೂರನ್ನು ಮಿನಿ ಪಾಕಿಸ್ತಾನ ಎಂದಿರುವುದು ಅವರ ಸ್ಥಾನಕ್ಕೆ ಶೋಭೆ ತರುವುದಿಲ್ಲ. ಅವರು ಕ್ಷೇತ್ರದ ಜನರ ಕ್ಷಮೆಯಾಚಿಸಬೇಕು ಎಂದು ಇನಾಯತ್ ಅಲಿ ಆಗ್ರಹಿಸಿದರು.

ಇಲ್ಲಸಲ್ಲದ ಆರೋಪ ಹೊರಿಸಿ ಜೆರೋಸಾ ಶಾಲೆಯ ಓರ್ವ ಶಿಕ್ಷಕಿಯನ್ನು ಬೀದಿಗೆ ತಂದ ಕ್ಷುದ್ರ ಮನಸ್ಥಿತಿಯ ವ್ಯಕ್ತಿಯಿಂದ ಜವಾಬ್ದಾರಿಯುತ ಹೇಳಿಕೆ ನಿರೀಕ್ಷಿಸಲು ಸಾಧ್ಯವಿಲ್ಲ.  ಜನರ ಭಾವನೆಗಳನ್ನು ಕೆರಳಿಸುತ್ತ ಅಭಿವೃದ್ಧಿಯ ಕೆಲಸ ಕಿಂಚಿತ್ತೂ ಮಾಡದ ಭರತ್ ಶೆಟ್ಟಿ ಬಗ್ಗೆ ಜನತೆ ಜಿಗುಪ್ಸೆ ಪಡುವಂತಾಗಿದೆ. ನಿತ್ಯ ನಿರಂತರವಾಗಿ ಕೋಮುಪ್ರಚೋದಕ ಭಾವನಾತ್ಮಕ ವಿಷಯಗಳನ್ನು ಮಾತನಾಡುವುದು, ನಿಂದಿಸಿ ಕೆಣಕಿ ಉದ್ರಿಕ್ತ ಪರಿಸ್ಥಿತಿ ನಿರ್ಮಾಣ ಮಾಡಿ ಸಮಾಜದ ಸ್ವಾಸ್ಥ್ಯ ಕೆಡಿಸುವುದೇ ಭರತ್ ಶೆಟ್ಟಿಯವರ ಚಾಳಿಯಾಗಿದೆ. ಅವರ ಪಕ್ಷದೊಳಗಿನ ಭಿನ್ನಮತದ ಕೋಪವನ್ನು ಸಾರ್ವಜನಿಕವಾಗಿ ತೋರಿಸುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದರು.

ಭರತ್ ಶೆಟ್ಟಿ ತನ್ನ ಕ್ಷೇತ್ರದಲ್ಲಿ ಒಂದು ಆರೋಗ್ಯ ಕೇಂದ್ರ ನಿರ್ಮಿಸಿಲ್ಲ,, ಮಾರುಕಟ್ಟೆ ಕಟ್ಟಡದ ಕಾಮಗಾರಿ ಮುಗಿಸಿಲ್ಲ, ಇವರೆಂತ ಶಾಸಕರು ಎಂಬ ಜನರ ಪ್ರಶ್ನೆಗಳನ್ನು ಎದುರಿಸಲು ಸಾಧ್ಯವಾಗದೇ ಜನರ ಮನಸ್ಸನ್ನು ಪದೇ ಪದೇ ಬೇರೆ ಕಡೆ ಸೆಳೆಯಲು ಭರತ್ ಶೆಟ್ಟಿ ಕೋಮುವಾದ ಕೆರಳಿಸುತ್ತಿರುವುದು ಖಂಡನೀಯ ಎಂದು ಇನಾಯತ್ ಅಲಿ ಆಕ್ರೋಶ ವ್ಯಕ್ತಪಡಿಸಿದರು.

Join Whatsapp
Exit mobile version