Home ಟಾಪ್ ಸುದ್ದಿಗಳು ನಟ ನಾಗಾರ್ಜುನಗೆ ಬಿಗ್ ಶಾಕ್: ಕನ್ವೆನ್ಷನ್ ಸೆಂಟರ್ ಧ್ವಂಸ

ನಟ ನಾಗಾರ್ಜುನಗೆ ಬಿಗ್ ಶಾಕ್: ಕನ್ವೆನ್ಷನ್ ಸೆಂಟರ್ ಧ್ವಂಸ

ಹೈದರಾಬಾದ್: ಟಾಲಿವುಡ್ ನಟ ಅಕ್ಕಿನೇನಿ ನಾಗಾರ್ಜುನ ಅವರ ಎನ್ ಕನ್ವೆನ್ಷನ್ ಹಾಲ್ ಅನ್ನು ನೆಲಸಮಗೊಳಿಸಲಾಗಿದೆ.


ಸಾರ್ವಜನಿಕ ಭೂಮಿಯನ್ನು ಅತಿಕ್ರಮಿಸಿ ಅಕ್ರಮವಾಗಿ ಕಟ್ಟಡ ನಿರ್ಮಿಸಿದ್ದಕ್ಕೆ ಹೈದರಾಬಾದ್ ವಿಪತ್ತು ಪ್ರತಿಕ್ರಿಯೆ ಮತ್ತು ಆಸ್ತಿಗಳ ಮೇಲ್ವಿಚಾರಣೆ ಮತ್ತು ರಕ್ಷಣೆ ಸಂಸ್ಥೆ ಶನಿವಾರ ನಟ ಅಕ್ಕಿನೇನಿ ನಾಗಾರ್ಜುನ ಅವರ ಹೈದ್ರಾಬಾದ್ ನ ಮಾದಾಪುರದಲ್ಲಿರುವ ಎನ್ ಕನ್ವೆನ್ಷನ್ ಆಸ್ತಿಯನ್ನು ನೆಲಸಮಗೊಳಿಸಿದೆ.


10 ಎಕರೆ ಜಾಗದಷ್ಟು ಎನ್ ಕನ್ವೆನ್ಷನ್ ಸೆಂಟರ್ ಹಲವಾರು ಭೂ ಬಳಕೆ ಹಾಗೂ ಪರಿಸರ ನಿಮಯಮಗಳನ್ನು ಉಲ್ಲಂಘಿಸಿರುವುದು ಕಂಡು ಬಂದಿದೆ.


ಜೊತೆಗೆ 1.2 ಎಕರೆ ತುಮ್ಮಿಡ್ಕುಂಟಾ ಕೆರೆಯನ್ನು ಒತ್ತುವರಿ ಮಾಡಿಕೊಳ್ಳಲಾಗಿತ್ತು. 2 ಎಕರೆ ಬಫರ್ ವಲಯವನ್ನು ಬಳಸಿಕೊಂಡು ಎನ್ ಕನ್ವೆನ್ಷನ್ ಸೆಂಟರ್ ನಿರ್ಮಾಣ ಮಾಡಿದ್ದಾರೆ ಎಂದು ಆರೋಪ ಬಂದಿತ್ತು. ಇದೀಗ ಹೈಡ್ರಾ ಸಂಸ್ಥೆಯ ಅಧಿಕಾರಿಗಳು ಸುಮಾರು ಮೂರುವರೆ ಎಕರೆ ಜಾಗದಲ್ಲಿರುವ ಎನ್ ಕನ್ವೆನ್ಷನ್ ಸೆಂಟರ್ ನನ್ನು ತೆರವುಗೊಳಿಸಿದ್ದಾರೆ

Join Whatsapp
Exit mobile version