Home ಟಾಪ್ ಸುದ್ದಿಗಳು ಲೋಕಸಭೆಯಲ್ಲಿ ವಕ್ಫ್ ಮಂಡಳಿ ಕಾನೂನು ತಿದ್ದುಪಡಿ ಮಸೂದೆ ಮಂಡನೆ

ಲೋಕಸಭೆಯಲ್ಲಿ ವಕ್ಫ್ ಮಂಡಳಿ ಕಾನೂನು ತಿದ್ದುಪಡಿ ಮಸೂದೆ ಮಂಡನೆ

ನವದೆಹಲಿ: ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ವಕ್ಫ್ ಮಂಡಳಿ ಕಾನೂನು ತಿದ್ದುಪಡಿ ಮಸೂದೆಯನ್ನು ಇಂದು ಲೋಕಸಭೆಯಲ್ಲಿ ಮಂಡಿಸಿದೆ.


ಇದಕ್ಕೆ ಕಾಂಗ್ರೆಸ್ ಸೇರಿದಂತೆ ಹಲವು ಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸಿವೆ. ನಾವು ಈ ಮಸೂದೆಯನ್ನು ವಿರೋಧಿಸುತ್ತೇವೆ, ಜನರು ವಕ್ಫ್ ಮಂಡಳಿಗೆ ಸ್ವಿಚ್ಛೆಯಿಂದ ದಾನವಾಗಿ ನೀಡುತ್ತಿದ್ದಾರೆ. ಧಾರ್ಮಿಕ ಸಂಸ್ಥೆಗಳಿಗೆ ಸ್ಥಿರ ಹಾಗೂ ಚರಾಸ್ಥಿ ನೀಡುವ ಅಧಿಕಾರ ಇದೆ. ಮುಸ್ಲಿಂಮೇತರರು ಈ ಸಂಸ್ಥೆಯ ಭಾಗವಾಗಿರಲು ಹೇಗೆ ಸಾಧ್ಯ, ಸುಪ್ರೀಂಕೋರ್ಟ್ ಅಯೋಧ್ಯಾ ಕಮಿಟಿ ರಚನೆ ಮಾಡಿತ್ತು ಬೇರೆ ಧರ್ಮದವರು ಈ ಕಮಿಟಿಯಲ್ಲಿ ಇರಲು ಸಾಧ್ಯವಿದೆಯೇ? ಎಂದು ಪ್ರಶ್ನಿಸಿದ್ದಾರೆ.


ಈ ಮಸೂದೆಯಿಂದ ಸಂವಿಧಾನದ ಉಲ್ಲಂಘನೆಯಾಗುತ್ತಿಲ್ಲ ಎಂದು ವಕ್ಫ್ ತಿದ್ದುಪಡಿ ಮಸೂದೆ ಕುರಿತು ಕಿರಣ್ ರಿಜಿಜು ಹೇಳಿದ್ದಾರೆ. ಹಕ್ಕು ಸಿಗದವರಿಗೆ ಹಕ್ಕುಪತ್ರ ನೀಡಲು ಈ ಕ್ರಮ ಕೈಗೊಳ್ಳಲಾಗುತ್ತಿದೆ. ಯಾವುದೇ ಧರ್ಮದಲ್ಲಿ ಹಸ್ತಕ್ಷೇಪ ಇಲ್ಲ. ವಿರೋಧ ಪಕ್ಷಗಳ ಎಲ್ಲ ಆತಂಕಗಳು ದೂರವಾಗುತ್ತವೆ. ಈ ಮಸೂದೆಯನ್ನು ಬೆಂಬಲಿಸಿ, ನಿಮಗೆ ಕೋಟಿ ಕೋಟಿ ಜನರ ಆಶೀರ್ವಾದ ಸಿಗುತ್ತದೆ.


ಈ ಮಸೂದೆಯು ಸಂವಿಧಾನದ 14, 15 ಮತ್ತು 25 ನೇ ವಿಧಿಯ ತತ್ವಗಳನ್ನು ಉಲ್ಲಂಘಿಸುತ್ತದೆ. ಈ ಮಸೂದೆ ತಾರತಮ್ಯ ಮತ್ತು ಅನಿಯಂತ್ರಿತವಾಗಿದೆ. ಈ ಮಸೂದೆಯನ್ನು ತರುವ ಮೂಲಕ ನೀವು (ಕೇಂದ್ರ ಸರ್ಕಾರ) ರಾಷ್ಟ್ರವನ್ನು ಒಗ್ಗೂಡಿಸುವ ಪ್ರಯತ್ನ ಮಾಡುತ್ತಿಲ್ಲ ವಿಭಜಿಸುತ್ತಿದ್ದೀರಿ. ನೀವು ಮುಸ್ಲಿಮರ ಶತ್ರು ಎಂಬುದಕ್ಕೆ ಈ ಮಸೂದೆಯೇ ಸಾಕ್ಷಿ ಅಸಾದುದ್ದೀನ್ ಓವೈಸಿ ಹೇಳಿದ್ದಾರೆ.

Join Whatsapp
Exit mobile version