ನ. 12ರಿಂದ ಏರ್ ಇಂಡಿಯಾದೊಂದಿಗೆ ವಿಸ್ತಾರ ಏರ್ ಲೈನ್ಸ್ ವಿಲೀನ

Prasthutha|

ಸೆ. 3ರ ಬಳಿಕ ವಿಸ್ತಾರದಲ್ಲಿ ಫ್ಲೈಟ್ ಬುಕಿಂಗ್ ಇಲ್ಲ

- Advertisement -

ನವದೆಹಲಿ: ನವೆಂಬರ್ 12ರಿಂದ ವಿಸ್ತಾರ ಏರ್ ಲೈನ್ಸ್ ವಿಮಾನ ಸಂಸ್ಥೆಯು ಏರ್ ಇಂಡಿಯಾದೊಂದಿಗೆ ವಿಲೀನಗೊಳ್ಳಲಿದೆ. ವಿಸ್ತಾರ ಎನ್ನುವ ಬ್ರಾಂಡ್ ನಡಿ ನವೆಂಬರ್ 11ರಂದು ಕೊನೆಯ ಬಾರಿಗೆ ವಿಮಾನ ಕಾರ್ಯಾಚರಣೆ ನಡೆಸಲಿದೆ.


ನವೆಂಬರ್ 12ರ ಬಳಿಕ ವಿಸ್ತಾರ ಹೆಸರಿನಲ್ಲಿ ವಿಮಾನಗಳಿರುವುದಿಲ್ಲ. ಇವೆಲ್ಲವೂ ಏರ್ ಇಂಡಿಯಾ ಬ್ರ್ಯಾಂಡ್ ಅಡಿಯಲ್ಲಿ ಚಾಲನೆಯಲ್ಲಿರುತ್ತವೆ. ನವೆಂಬರ್ 11ರವರೆಗೂ ವಿಸ್ತಾರ ವಿಮಾನಗಳಿಗೆ ಬುಕಿಂಗ್ ಮಾಡಲು ಅವಕಾಶ ಇರುತ್ತದಾದರೂ ಅವೆಲ್ಲವೂ ಏರ್ ಇಂಡಿಯಾ ತಾಣಕ್ಕೆ ರೀಡೈರೆಕ್ಟ್ ಆಗಲಿದೆ.

- Advertisement -


ಗಮನಿಸಬೇಕಾದ ಸಂಗತಿ ಎಂದರೆ, ಸೆಪ್ಟಂಬರ್ 3ರವರೆಗೆ ಮಾತ್ರವೇ ವಿಸ್ತಾರದಲ್ಲಿ ಫ್ಲೈಟ್ ಬುಕಿಂಗ್ ಅವಕಾಶ ಇರುತ್ತದೆ. ನವೆಂಬರ್ 11ರವರೆಗಿನ ಫ್ಲೈಟ್ ಗಳನ್ನು ಮಾತ್ರ ಬುಕಿಂಗ್ ಮಾಡಬಹುದು. ಸೆಪ್ಟೆಂಬರ್ 3ರ ಬಳಿಕ ಬುಕಿಂಗ್ ಮಾಡಬೇಕಾದರೆ ಏರ್ ಇಂಡಿಯಾ ಬಳಸಬೇಕಾಗುತ್ತದೆ.


ವಿಸ್ತಾರ ಏರ್ ಲೈನ್ಸ್ ಸಂಸ್ಥೆ ಟಾಟಾ ಗ್ರೂಪ್ ಒಡೆತನದಲ್ಲಿದೆ. ಏರ್ ಇಂಡಿಯಾ ಸಂಸ್ಥೆಯಲ್ಲಿ ಟಾಟಾ ಗ್ರೂಪ್ ಮತ್ತು ಸಿಂಗಾಪುರ್ ಏರ್ ಲೈನ್ಸ್ ಜಂಟಿ ಪಾಲುದಾರಿಕೆ ಹೊಂದಿವೆ. ಇದರಲ್ಲಿ ಟಾಟಾ ಗ್ರೂಪ್ ಷೇರುಪಾಲು ಶೇ. 51ರಷ್ಟಿದ್ದರೆ, ಸಿಂಗಾಪುರ್ ಏರ್ ಲೈನ್ಸ್ ಷೇರುಪಾಲು ಶೇ. 49ರಷ್ಟಿದೆ.


ವಿಸ್ತಾರ ಸಂಸ್ಥೆ ಏರ್ ಇಂಡಿಯಾದಲ್ಲಿ ವಿಲೀನಗೊಂಡ ಬಳಿಕ ಬೃಹತ್ ಏರ್ ಇಂಡಿಯಾದಲ್ಲಿ ಶೇ. 25.1ರಷ್ಟು ಷೇರುಪಾಲನ್ನು ಸಿಂಗಾಪುರ್ ಏರ್ ಲೈನ್ಸ್ ಖರೀದಿಸುತ್ತಿದೆ. ಈ ಖರೀದಿಗೆ ಸರ್ಕಾರದಿಂದ ಅನುಮೋದನೆ ಸಿಕ್ಕಿದೆ.


‘ವಿಮಾನದಲ್ಲಿ ಬದಲಾವಣೆ, ಸಿಬ್ಬಂದಿ, ನುರಿತ ಸಹೋದ್ಯೋಗಿಗಳು, ಮುಖ್ಯವಾಗಿ ನಮ್ಮ ಮೌಲ್ಯಯುತ ಗ್ರಾಹಕರು ಹೊಸ ಏರ್ ಇಂಡಿಯಾಕ್ಕೆ ಸಾಧ್ಯವಾದಷ್ಟು ಹೊಂದಿಕೊಳ್ಳಲು ಏರ್ ಇಂಡಿಯಾ ಹಾಗೂ ವಿಸ್ತಾರದ ಸಿಬ್ಬಂದಿ ಒಟ್ಟಾಗಿ ಹಲವು ತಿಂಗಳಿನಿಂದ ಕೆಲಸ ಮಾಡಿದ್ದಾರೆ’ ಎಂದು ಏರ್ ಇಂಡಿಯಾ ಸಿಇಒ ಹಾಗೂ ಎಂ.ಡಿ ಕ್ಯಾಂಪ್ಬೆಲ್ ವಿಲ್ಸನ್ ಹೇಳಿದ್ದಾರೆ.



Join Whatsapp
Exit mobile version