Home ಟಾಪ್ ಸುದ್ದಿಗಳು ಮಂಗಳೂರು | ಅಸುರಕ್ಷಿತ ಆಹಾರ ನೀಡುವ ಹೋಟೆಲ್’ಗಳ ಮೇಲೆ ನಿರ್ದಾಕ್ಷಿಣ್ಯ ಕ್ರಮ: ಗುಂಡೂರಾವ್

ಮಂಗಳೂರು | ಅಸುರಕ್ಷಿತ ಆಹಾರ ನೀಡುವ ಹೋಟೆಲ್’ಗಳ ಮೇಲೆ ನಿರ್ದಾಕ್ಷಿಣ್ಯ ಕ್ರಮ: ಗುಂಡೂರಾವ್

ಮಂಗಳೂರು: ಆಹಾರ ಸುರಕ್ಷತೆ ತಪಾಸಣೆಗೆ ಆಹಾರ ಇಲಾಖೆ ರಾಜ್ಯಾದ್ಯಂತ ಎರಡು ದಿನಗಳ ವಿಶೇಷ ಆಂದೋಲನ ಹಮ್ಮಿಕೊಂಡಿರುವ ಬಗ್ಗೆ ಆರೋಗ್ಯ ಮತ್ತು ಆಹಾರ ಸುರಕ್ಷತಾ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ಪ್ರತಿಕ್ರಿಯಿಸಿದರು.


ಮಂಗಳೂರಿನಲ್ಲಿ ಮಾತನಾಡಿದ ಅವರು, ಇಡೀ ರಾಜ್ಯದಲ್ಲಿ ಆಹಾರ ಗುಣಮಟ್ಟ ಪರಿಶೀಲನೆ ಮಾಡುತ್ತಿದ್ದೇವೆ. ಇದುವರೆಗೆ ಆಹಾರ ಸುರಕ್ಷತಾ ಇಲಾಖೆ ಇದೆಯೆಂದು ಜನರಿಗೆ ಗೊತ್ತಿರಲಿಲ್ಲ. ನಮ್ಮ ಸರ್ಕಾರ ಬಂದ ಮೇಲೆ ಅಧಿಕಾರಿಗಳಿಗೆ ಸ್ಪಷ್ಟ ಮಾರ್ಗಸೂಚಿ ನೀಡಿದ್ದೇವೆ ಎಂದರು.


ಹೊಟೆಲ್, ರೆಸ್ಟೊರೆಂಟ್ ಗಳಲ್ಲಿ ಆಹಾರದ ತಯಾರಿ ಪರಿಶೀಲನೆಗೆ ಹೇಳಿದ್ದೇವೆ. ಪ್ರತಿ ತಿಂಗಳು ಕೆಲ ಫುಡ್ ಐಟಂ ತಗೊಂಡು ವಿಶೇಷ ತಪಾಸಣೆ ಮಾಡುತ್ತಿದ್ದೇವೆ. ಮಾಂಸದಂಗಡಿ, ಆಹಾರ ಉದ್ದಿಮೆಗಳಲ್ಲಿ ತಪಾಸಣೆ ಮಾಡುತ್ತಿದ್ದೇವೆ. ಪ್ರತಿ ತಿಂಗಳು ವರದಿ ಬಿಡುಗಡೆಗೆ ಸೂಚಿಸಿದ್ದೇವೆ. ಜಾಗೃತಿ ಮತ್ತು ಕ್ರಮ ಎರಡೂ ಆಗುತ್ತದೆ ಎಂದು ಅವರು ಹೇಳಿದರು.


ಅಸುರಕ್ಷಿತ ಆಹಾರ ತಯಾರಿಸುತ್ತಿರುವವರ ಮೇಲೆ ಕಾನೂನು ರೀತಿಯಲ್ಲಿ ಕ್ರಮ ಜರುಗಿಸಲಾಗುವುದು ಎಂದು ಹೇಳಿದ್ದಾರೆ.

Join Whatsapp
Exit mobile version