ವಿರಾಟ್ ಕೊಹ್ಲಿಗೆ ಗಾಯ: ಬಿಗ್ ಅಪ್ ​ಡೇಟ್ ನೀಡಿದ RCB

- Advertisement -

ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಐಪಿಎಲ್​ ನ 14ನೇ ಪಂದ್ಯದ ವೇಳೆ ಗಾಯಗೊಂಡಿದ್ದರು. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದ ಫೀಲ್ಡಿಂಗ್ ವೇಳೆ ಕೊಹ್ಲಿಯ ಕೈಗೆ ಗಾಯವಾಗಿತ್ತು.

- Advertisement -

ಗುಜರಾತ್ ಟೈಟಾನ್ಸ್ ತಂಡದ ಆರಂಭಿಕ ಆಟಗಾರ ಸಾಯಿ ಸುದರ್ಶನ್ ಡೀಪ್ ಮಿಡ್​ ವಿಕೆಟ್​ನತ್ತ ಬಾರಿಸಿದ ಚೆಂಡನ್ನು ಹಿಡಿಯುವ ಯತ್ನದಲ್ಲಿ ಕೊಹ್ಲಿಯ ಹೆಬ್ಬರಳಿನ ಭಾಗಕ್ಕೆ ಗಾಯವಾಗಿದೆ. ಅತ್ತ ಚೆಂಡು ತಾಗುತ್ತಿದ್ದಂತೆ ಕೊಹ್ಲಿ ನೋವಿನಿಂದ ಕುಸಿದು ಕೂತಿದ್ದರು. ಈ ಗಾಯದ ಕಾರಣ ವಿರಾಟ್ ಕೊಹ್ಲಿ ಮುಂದಿನ ಪಂದ್ಯದಲ್ಲಿ ಕಣಕ್ಕಿಳಿಯುವುದು ಅನುಮಾನ ಎನ್ನಲಾಗಿತ್ತು.

ಇದೀಗ ವಿರಾಟ್ ಕೊಹ್ಲಿಯ ಗಾಯದ ಬಗ್ಗೆ ಆರ್​ ಸಿಬಿ ತಂಡದ ಮುಖ್ಯ ಕೋಚ್ ಆ್ಯಂಡಿ ಫ್ಲವರ್ ಮಾಹಿತಿ ನೀಡಿದ್ದಾರೆ. ಕೊಹ್ಲಿಗೆ ಉಂಟಾಗಿರುವ ಗಾಯವು ಗಂಭೀರವೇನಲ್ಲ. ಅಲ್ಲದೆ ಅವರು ಫೈನ್ ಆಗಿದ್ದು, ಮುಂದಿನ ಪಂದ್ಯದಲ್ಲಿ ಕಣಕ್ಕಿಳಿಯುವ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.

- Advertisement -

ಹೀಗಾಗಿ ಏಪ್ರಿಲ್ 7 ರಂದು ನಡೆಯಲಿರುವ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ವಿರಾಟ್ ಕೊಹ್ಲಿ ಕಣಕ್ಕಿಳಿಯುವುದು ಖಚಿತ. ಏಕೆಂದರೆ ಈ ಪಂದ್ಯಕ್ಕೆ ಇನ್ನೂ ಮೂರು ದಿನಗಳ ಕಾಲಾವಕಾಶವಿದ್ದು, ಅದರೊಳಗೆ ಅವರ ಬೆರಳಿನ ಗಾಯವು ಸಂಪೂರ್ಣ ಗುಣಮುಖವಾಗುವ ನಿರೀಕ್ಷೆಯಿದೆ.

ಇನ್ನು ಈ ಬಾರಿಯ ಐಪಿಎಲ್​ನಲ್ಲಿ ಮೂರು ಪಂದ್ಯಗಳನ್ನಾಡಿರುವ ಆರ್​ಸಿಬಿ ತಂಡವು 2 ಜಯ ಹಾಗೂ ಒಂದು ಸೋಲನುಭವಿಸಿದೆ.

- Advertisement -


Must Read

Related Articles