Home Uncategorized ಟಿ20 ವಿಶ್ವಕಪ್‌| ಭಾರತ – ಪಾಕಿಸ್ತಾನ ಪಂದ್ಯದ ವೇಳೆ ಸ್ತಬ್ಧವಾದ ಆನ್‌ ಲೈನ್‌ ಶಾಪಿಂಗ್‌ !

ಟಿ20 ವಿಶ್ವಕಪ್‌| ಭಾರತ – ಪಾಕಿಸ್ತಾನ ಪಂದ್ಯದ ವೇಳೆ ಸ್ತಬ್ಧವಾದ ಆನ್‌ ಲೈನ್‌ ಶಾಪಿಂಗ್‌ !

ನವದೆಹಲಿ: ಭಾನುವಾರ ಭಾರತ-ಪಾಕಿಸ್ತಾನ ತಂಡಗಳ ನಡುವೆ ನಡೆದ ಜಿದ್ದಾಜಿದ್ದಿನ ಪಂದ್ಯದ ವೇಳೆ ಆನ್‌ಲೈನ್‌ ಶಾಪಿಂಗ್‌ ಸ್ತಬ್ಧವಾಗಿತ್ತು ಎಂಬ ಮಹತ್ವದ ಮಾಹಿತಿ ಹೊರಬಿದ್ದಿದೆ.

ಬೆಳಗ್ಗೆ 9.30ರಿಂದ ಪಂದ್ಯ ಆರಂಭವಾಗುವರೆಗೂ ದೀಪಾವಳಿ ಹಿನ್ನಲೆಯಲ್ಲಿ ಭಾನುವಾರದ ಆನ್‌ಲೈನ್‌ ಶಾಪಿಂಗ್‌ ಭರ್ಜರಿಯಾಗಿಯೇ ಸಾಗಿತ್ತು. ಆದರೆ ಪಂದ್ಯ ಆರಂಭವಾದ ಕೂಡಲೇ ಆನ್‌ಲೈನ್‌ ವ್ಯವಹಾರ ಕುಂಠಿತವಾಗಲು ಆರಂಭಿಸಿತು. ಅದರಲ್ಲೂ ಪಂದ್ಯದ ಕೊನೆಯ ಓವರ್‌ಗಳಲ್ಲಿ ಪಂದ್ಯ ರೋಮಾಂಚನಕಾರಿ ಘಟ್ಟ ತಲುಪಿದ್ದ ವೇಳೆ ಕೊಹ್ಲಿ ಬ್ಯಾಟಿಂಗ್‌ ವೀಕ್ಷಿಸಲು ಮುಗಿಬಿದ್ದ ಜನ ಆನ್‌ಲೈನ್‌ನಲ್ಲಿ ಶಾಪಿಂಗ್‌ ಮಾಡುವುದನ್ನೇ ಮರೆತುಬಿಟ್ಟರು.

ಭಾನುವಾರದ ಆನ್‌ಲೈನ್‌ ಶಾಪಿಂಗ್‌ ಕುರಿತಾದ ಗ್ರಾಫ್‌ಅನ್ನು ಮ್ಯಾಕ್ಸ್ ಲೈಫ್‌ನ ಮುಖ್ಯ ಹೂಡಿಕೆ ಅಧಿಕಾರಿ ಮಿಹಿರ್ ವೋರಾ ಅವರು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಇದರಲ್ಲಿ ಬೆಳಿಗ್ಗೆ 9 ರಿಂದ ಮಧ್ಯಾಹ್ನ 1:30 ರವರೆಗೆ ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ದೀಪಾವಳಿ ಶಾಪಿಂಗ್‌ನಲ್ಲಿ ನಿರತರಾಗಿರುವುದು ಕಂಡು ಬಂದಿದೆ. ಆದರೆ ಹೈವೋಲ್ಟೇಜ್‌ ಪಂದ್ಯ ಪ್ರಾರಂಭವಾಗುತ್ತಲೇ ಆನ್‌ಲೈನ್ ವಹಿವಾಟುಗಳ ಗ್ರಾಫ್‌ ಕೆಳಮುಖವಾಗಿದೆ. ಸಂಜೆ 5 ಗಂಟೆಯಿಂದ ಪಂದ್ಯ ಮುಗಿಯುವವರೆಗೂ ವಹಿವಾಟು ಮತ್ತಷ್ಟು ಕುಸಿತ ಕಂಡಿದೆ.

https://twitter.com/theMihirV/status/1584455583050391553?ref_src=twsrc%5Etfw%7Ctwcamp%5Etweetembed%7Ctwterm%5E1584455583050391553%7Ctwgr%5E57e82af8a1e4fddc6a8d037fae89f478c60d7e48%7Ctwcon%5Es1_&ref_url=https%3A%2F%2Fpublish.twitter.com%2F%3Fquery%3Dhttps3A2F2Ftwitter.com2FtheMihirV2Fstatus2F1584455583050391553widget%3DTweet

ʻಭಾರತದಲ್ಲಿ ನಿನ್ನೆ ಶಾಪಿಂಗ್ ನಿಲ್ಲಿಸಿದ ವಿರಾಟ್‌ ಕೊಹ್ಲಿ! ನಿನ್ನೆ ಬೆಳಿಗ್ಗೆ 9 ಗಂಟೆಯಿಂದ ಸಂಜೆಯವರೆಗೆ ಯುಪಿಐ ವಹಿವಾಟುಗಳು – ಪಂದ್ಯವು ಆಸಕ್ತಿದಾಯಕವಾಗುತ್ತಿದ್ದಂತೆ, ಆನ್‌ಲೈನ್ ಶಾಪಿಂಗ್ ಸ್ಥಗಿತಗೊಂಡಿತ್ತು. ಪಂದ್ಯದ ಬಳಿಕ ಆನ್‌ಲೈನ್ ವಹಿವಾಟುಗಳು ಮತ್ತೆ ಚೇತರಿಕೆ ಕಂಡಿದೆ ಎಂದು ಹೂಡಿಕೆ ಅಧಿಕಾರಿ ಮಿಹಿರ್ ವೋರಾ ಟ್ವೀಟ್‌ ಮಾಡಿದ್ದಾರೆ.

ಆಸ್ಟ್ರೇಲಿಯಾದ ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್‌ನಲ್ಲಿ ನಡೆದ ಸಾಂಪ್ರದಾಯಿಕ ಎದುರಾಳಿಗಳ ನಡುವಿನ ಪಂದ್ಯವು ರೋಚಕ ಅಂತ್ಯ ಕಂಡಿತ್ತು. ಪಾಕಿಸ್ತಾನ ನೀಡಿದ್ದ 160 ರನ್‌ಗಳನ್ನು ಬೆನ್ನಟ್ಟುವ ವೇಳೆ ಮೊದಲ 6 ಓವರ್‌ಗಳಲ್ಲಿ ಭಾರತ 4 ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ಆದರೆ ಕೊಹ್ಲಿ ಮತ್ತು ಹಾರ್ದಿಕ್ ಪಾಂಡ್ಯ  ವಿಕೆಟ್‌ ಕಾಪಾಡಿಕೊಂಡು ಜವಾಬ್ದಾರಿಯುತ ಆಟವಾಡಿದರು. ಕೊಹ್ಲಿ 53 ಎಸೆತಗಳಲ್ಲಿ ಅಜೇಯ 82 ರನ್ ಮತ್ತು ಹಾರ್ದಿಕ್ ಪಾಂಡ್ಯ 37 ಎಸೆತಗಳಲ್ಲಿ 40 ರನ್ ಗಳಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

Join Whatsapp
Exit mobile version