ಕಾಬೂಲ್: ಅಸದಾಬಾದ್ ನಲ್ಲಿ ಸ್ವಾತಂತ್ರ್ಯ ದಿನಾಚರಣೆ ಆಚರಿಸುತ್ತಿದ್ದ ಜನರ ಗುಂಪಿನ ಮೇಲೆ ತಾಲಿಬಾನ್ ನಡೆಸಿದ ಗುಂಡಿನ ದಾಳಿಯ ಹಿನ್ನೆಲೆಯಲ್ಲಿ ಕನಿಷ್ಠ ಇಬ್ಬರು ಸಾವನ್ನಪ್ಪಿದ್ದಾರೆಂದು ಪ್ರತ್ಯಕ್ಷದರ್ಶಿಗಳು ಮಾಧ್ಯಮಕ್ಕೆ ತಿಳಿಸಿದ್ದಾರೆ.
ಜಲಾಲಾಬಾದ್ ನಲ್ಲಿ ತಾಲಿಬಾನ್ ಹೋರಾಟಗಾರರು ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಅಫ್ಘಾನ್ ಧ್ವಜವನ್ನು ಬೀಸಿದ ಜನರ ಮೇಲೆ ಗುಂಡು ಹಾರಿಸಿದರು. ಈ ಸಂದರ್ಭದಲ್ಲಿ ಒಬ್ಬ ವ್ಯಕ್ತಿ ಮತ್ತು ಹದಿಹರೆಯದ ಹುಡುಗ ಗಾಯಗೊಂಡಿದ್ದಾರೆ ಎಂದು ಮೂಲಗಳ ಸ್ಪಷ್ಟಪಡಿಸಿವೆ. ಮಾತ್ರಲ್ಲದೆ ಕಾಬೂಲ್ ನಲ್ಲಿ ಧ್ವಜ ಹಾರಿಸಿದ ಘಟನೆ ವರದಿಯಾಗಿದ್ದು, ಮಹಿಳೆಯರು ಸೇರಿದಂತೆ ಸಾರ್ವಜನಿಕರು ಬೀದಿಗಿಳಿದು ಧ್ವಜವನ್ನು ಬೀಸುತ್ತಾ “ ನಮ್ಮ ಧ್ವಜ ನಮ್ಮ ಗುರುತು” ಎಂಬ ಘೋಷಣೆಗಳನ್ನು ಕೂಗಿದರು.
ಈ ಮಧ್ಯೆ ಕಾಬೂಲ್ ವಿಮಾನ ನಿಲ್ದಾಣದಿಂದ ಸ್ಥಳಾಂತರ ಪ್ರಕ್ರಿಯೆ ಮುಂದುವರಿದಿದೆ ಎಂದು ಹೇಳಲಾಗುತ್ತಿದೆ.
ಆಗಸ್ಟ್ 31 ಕ್ಕೆ ಅಮೆರಿಕ ಪಡೆಯ ನಿರ್ಗಮನಕ್ಕೆ ಅಂತಿಮ ಗಡುವಾಗಿದ್ದು, ಪ್ರತಿಯೊಬ್ಬ ಅಮೆರಿಕನ್ನರರನ್ನು ಸ್ಥಳಾಂತರಿಸುವವರೆಗೆ ಸೈನಿಕರನ್ನು ಅಫ್ಘಾನಿಸ್ತಾನದಲ್ಲಿ ಮುಂದುವರಿಸುವುದಾಗಿ ಅಮೆರಿಕ ಅಧ್ಯಕ್ಷ ಜೋ ಬೈಡನ್ ಮಾಧ್ಯಮದ ಮೂಲಕ ಮಾಹಿತಿ ನೀಡಿದ್ದಾರೆ.