ಶಾಸಕ ಸತೀಶ್ ರೆಡ್ಡಿ ಕಾರುಗಳಿಗೆ ಬೆಂಕಿ ಹಚ್ಚಿದ ಪ್ರಕರಣ: ಆರೋಪಿಗಳ ಬಾಯಿ ಬಿಡಿಸಲು ಪೊಲೀಸರ ಹರಸಾಹಾಸ

Prasthutha|

ಬೆಂಗಳೂರು: ಶಾಸಕ ಸತೀಶ್ ರೆಡ್ಡಿ ಕಾರುಗಳಿಗೆ ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿ ಆಗ್ನೇಯ ವಿಭಾಗದ ಪೊಲೀಸರು ಆರೋಪಿಗಳ ಬಾಯಿ ಬಿಡಿಸಲು ಪೊಲೀಸರ ಹರಸಾಹಾಸ ಪಡುತ್ತಿದ್ದಾರೆ.

- Advertisement -


ಮೂವರು ಆರೋಪಿಗಳನ್ನು ಪ್ರತ್ಯೇಕವಾಗಿ ವಿಚಾರಣೆ ನಡೆಸುತ್ತಿರುವ ಪೊಲೀಸರು ಎಷ್ಟೇ ಕೇಳಿದರೂ ಆರೋಪಿಗಳು ಮಾತ್ರ ಬಡವ, ಶ್ರೀಮಂತ ಕಾರಣ ನೀಡುತ್ತಿದ್ದಾರೆ. ಮತ್ತೊಂದೆಡೆ ಪ್ರಕರಣದ ಸಂಬಂಧ ರೌಡಿ ಸೋಮ ಅಲಿಯಾಸ್ ಸೋಮಶೇಖರ್ ಗೆ ಪೊಲೀಸರಿಂದ ಶೋಧ ಕಾರ್ಯ ನಡೆಯುತ್ತಿದೆ.
ಈ ಹಿಂದೆ ಸತೀಶ್ ರೆಡ್ಡಿ ಮನೆಗೆ ಕಲ್ಲು ಹೊಡೆದಿದ್ದ ಆರೋಪಿ ಸೋಮಶೇಖರ್, ಕಾರುಗಳಿಗೆ ಬೆಂಕಿ ಹಚ್ಚಿದ ಘಟನೆ ಬಳಿಕ ಪರಾರಿಯಾಗಿದ್ದ.
ಹೀಗಾಗಿ ಪೊಲೀಸರಿಗೆ ಸೋಮಶೇಖರ್ ಮೇಲೆ ಅನುಮಾನ ಬಂದಿದ್ದು, ಹುಡುಕಾಟ ನಡೆಸುತ್ತಿದ್ದಾರೆ. ನಿನ್ನೆಅಜ್ಞಾತ ಸ್ಥಳದಿಂದ ಸೋಮಶೇಖರ್ ವಿಡಿಯೋ ಹರಿಬಿಟ್ಟಿದ್ದರು. ನನ್ನನ್ನು ಈ ಪ್ರಕರಣದಲ್ಲಿ ಸಿಕ್ಕಿಸಲಾಗುತ್ತಿದೆ ಎಂದು ವಿಡಿಯೋದಲ್ಲಿ ಸೋಮಶೇಖರ್ ಸತೀಶ್ ರೆಡ್ಡಿ ವಿರುದ್ಧ ಆರೋಪ ಮಾಡಿದ್ದಾನೆ.

Join Whatsapp
Exit mobile version