Home ಟಾಪ್ ಸುದ್ದಿಗಳು ವಿನೋದ್ ಕಾಪ್ರಿ ನಿರ್ದೇಶನದಲ್ಲಿ ತೆರೆಕಾಣಲಿದೆ ‘ಗುಜರಾತ್ ಫೈಲ್ಸ್’

ವಿನೋದ್ ಕಾಪ್ರಿ ನಿರ್ದೇಶನದಲ್ಲಿ ತೆರೆಕಾಣಲಿದೆ ‘ಗುಜರಾತ್ ಫೈಲ್ಸ್’

ಮುಂಬೈ: ಬಾಲಿವುಡ್ ನಲ್ಲಿ ತೆರೆಕಂಡಿರುವ ವಿವಾದಾತ್ಮಕ ‘ದಿ ಕಾಶ್ಮೀರ್ ಫುಲ್ಸ್’ ಚಿತ್ರಕ್ಕೆ ಪರ ವಿರೋಧ ವಿಮರ್ಶನೆಗಳು ಉಂಟಾಗುತ್ತಿದೆ. ಒಂದೇ ಕೋಮಿನ ಜನರನ್ನು ಪ್ರಮುಖರನ್ನಾಗಿಸಿ ಚಿತ್ರವನ್ನು ಚಿತ್ರೀಕರಿಸಲಾಗಿದೆ ಎಂಬ ಆರೋಪಗಳು ಕೇಳಿಬಂದಿದೆ. ಹಲವು ರಾಜ್ಯಗಳಲ್ಲಿ ಚಿತ್ರಕ್ಕೆ ತೆರಿಗೆ ವಿನಾಯಿತಿಯನ್ನು ನೀಡಲಾಗಿದ್ದು ಚರ್ಚೆಗಳಿಗೂ ಕಾರಣವಾಗಿದೆ.

ಇದರ ಬೆನ್ನಲ್ಲೇ ಈಗ ಬಾಲಿವುಡ್ ನಿರ್ದೇಶಕ ವಿನೋದ್ ಕಾಪ್ರಿ ‘ಗುಜರಾತ್ ಫೈಲ್ಸ್’ ಸಿನಿಮಾವನ್ನು ನಿರ್ದೇಶಿಸುವುದಾಗಿ ಹೇಳಿದ್ದಾರೆ. ಈ ಸಿನಿಮಾ ತೆರೆಗೆ ತರುವ ಎಲ್ಲಾ ಸಿದ್ಧತೆಗಳನ್ನು ವಿನೋದ್ ಕಾಪ್ರಿ ಮಾಡಿಕೊಂಡಿದ್ದು, ಈ ಬಗ್ಗೆ ಪ್ರಧಾನಿ ಮೋದಿಗೆ ವಿನೋದ್ ಕಾಪ್ರಿ ಸವಾಲನ್ನು ಎಸಗಿದ್ದಾರೆ.

ನಿರ್ದೇಶಕ ವಿನೋದ್ ಪ್ರಧಾನಿ ಮೋದಿಗೆ ಟ್ವೀಟ್ ಮೂಲಕ ಪ್ರಶ್ನೆಗಳನ್ನು ಕೇಳಿದ್ದಾರೆ. ಟ್ವೀಟ್ ನಲ್ಲಿ ‘ಗುಜರಾತ್ ಫೈಲ್ಸ್ ಹೆಸರಿನಲ್ಲಿ, ಕಲೆ ಹಾಗೂ ಸತ್ಯಗಳ ಆಧಾರದ ಮೇಲೆ ಚಲನಚಿತ್ರ ಮಾಡಲು ನಾನು ಸಿದ್ಧನಿದ್ದೇನೆ. ಅದರಲ್ಲಿ ನಿಮ್ಮ ಪಾತ್ರವನ್ನು ಸಹ ವಿವರವಾಗಿ ತೋರಿಸಲಾಗುತ್ತಿದೆ ಎಂದಿದ್ದಾರೆ.

Join Whatsapp
Exit mobile version