Home ಟಾಪ್ ಸುದ್ದಿಗಳು ಬಿಳಿ ಸಮವಸ್ತ್ರ ಧರಿಸಿಲ್ಲ ಎಂದು ಯೋಗ ನಿರಾಕರಣೆ: ಗ್ರಾಮಸ್ಥರಿಂದ ಪ್ರತಿಭಟನೆ

ಬಿಳಿ ಸಮವಸ್ತ್ರ ಧರಿಸಿಲ್ಲ ಎಂದು ಯೋಗ ನಿರಾಕರಣೆ: ಗ್ರಾಮಸ್ಥರಿಂದ ಪ್ರತಿಭಟನೆ

ಬಾಗಲಕೋಟೆ: ಪಟ್ಟದಕಲ್ಲಿನಲ್ಲಿ ಆಯೋಜಿಸಿರುವ ಯೋಗ ಕಾರ್ಯಕ್ರಮಕ್ಕೆ ಬಿಳಿ ಸಮವಸ್ತ್ರ ಧರಿಸಿ ಬಂದಿಲ್ಲ ಎಂದು ಸ್ಥಳೀಯ ನಿವಾಸಿಗಳಿಗೆ ಪೊಲೀಸರು ಯೋಗ ನಿರಾಕರಣೆ ಮಾಡಿದ್ದು, ಈ ಹಿನ್ನೆಲೆ ಗ್ರಾಮಸ್ಥರು ಪ್ರತಿಭಟನೆ ಮಾಡಿದ್ದಾರೆ.


ಗ್ರಾಮದಲ್ಲಿ ಡಂಗುರ ಹೊಡೆದು ಯೋಗ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ತಿಳಿಸಲಾಗಿತ್ತು. ಆದರೆ, ಈಗ ಬಿಳಿ ಟೀ ಶರ್ಟ್ ಧರಿಸಿ ಬಂದಿಲ್ಲ ಎಂದು ಒಳಗೆ ಬಿಡುತ್ತಿಲ್ಲ ಎಂದು ನಿವಾಸಿ ಮಂಜುನಾಥ ಮತ್ತಿತರರು ದೂರಿದರು.
ಬಿಳಿ ಸಮವಸ್ತ್ರ ಧರಿಸಿ ಬಂದವರನ್ನು ಮಾತ್ರ ಪೊಲೀಸರು ಒಳಗೆ ಬಿಡುತ್ತಿದ್ದಾರೆ.

Join Whatsapp
Exit mobile version