ವಿಜಯಪುರ: ಕೆರೆಯಲ್ಲಿ ವಿದ್ಯುತ್ ಪ್ರವಹಿಸಿ ಇಬ್ಬರು ಬಾಲಕರು ಸಾವು

Prasthutha|

ವಿಜಯಪುರ: ಕೆರೆಯಲ್ಲಿ ವಿದ್ಯುತ್ ಪ್ರವಹಿಸಿ ಇಬ್ಬರು ಬಾಲಕರು ಸಾವನ್ನಪ್ಪಿದ ಘಟನೆ ವಿಜಯಪುರ ತಾಲೂಕಿನ ದ್ಯಾಬೇರಿಯಲ್ಲಿ ನಡೆದಿದೆ.

- Advertisement -

ರೋಹಿತ್ ಅನಿಲ್ ಚವಾಣ್ (8) ವಿಜಯ್ ಪಿಂಟು ಚವ್ಹಾಣ್ (16) ಮೃತರು. ಕೆರೆಯಲ್ಲಿ ಮೀನು ಹಿಡಿಯಲು ಹೋಗಿದ್ದಾಗ ಈ ದುರ್ಘಟನೆ ಸಂಭವಿಸಿದೆ.

ವಿದ್ಯುತ್ ವೈರ್ ತುಂಡಾಗಿ ಕೆರೆಗೆ ಬಿದ್ದಿತ್ತು, ಇದನ್ನು ಗಮನಿಸದೇ ಬಾಲಕರು ಕೆರೆಗೆ ಇಳಿದಿದ್ದಾರೆ. ಮೃತ ಬಾಲಕರ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ. ಘಟನೆ ನಡೆದ ಸ್ಥಳಕ್ಕೆ ಪೊಲೀಸರು ಧಾವಿಸಿ ಪರಿಶೀಲನೆ ನಡೆಸಿದ್ದಾರೆ.

Join Whatsapp
Exit mobile version