Home ಟಾಪ್ ಸುದ್ದಿಗಳು ವಿಜಯಪುರ ಪಾಲಿಕೆ ಚುನಾವಣೆ: ಬಿಜೆಪಿ 17, ಕಾಂಗ್ರೆಸ್ 10, ಖಾತೆ ತೆರೆದ AIMIM

ವಿಜಯಪುರ ಪಾಲಿಕೆ ಚುನಾವಣೆ: ಬಿಜೆಪಿ 17, ಕಾಂಗ್ರೆಸ್ 10, ಖಾತೆ ತೆರೆದ AIMIM

ವಿಜಯಪುರ: ವಿಜಯಪುರ ಮಹಾನಗರ ಪಾಲಿಕೆಯ ಚುನಾವಣೆಯ ಫಲಿತಾಂಶ ಸೋಮವಾರ ಪ್ರಕಟಗೊಂಡಿದ್ದು, 17 ಸ್ಥಾನ ಗೆಲ್ಲುವ ಮೂಲಕ ಬಿಜೆಪಿ ಮೇಲುಗೈ ಸಾಧಿಸಿದೆ. ಎಲ್ಲಾ 35 ವಾರ್ಡ್ ಗಳಲ್ಲೂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದ ಕಾಂಗ್ರೆಸ್ 10 ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ.


ಇನ್ನು ಜೆಡಿಎಸ್ 20 ಸ್ಥಾನಗಳಲ್ಲಿ ಸ್ಪರ್ಧಿಸಿ ಒಂದು ವಾರ್ಡ್ ನಲ್ಲಿ ಮಾತ್ರ ಗೆದ್ದುಕೊಂಡಿದ್ದು, ಇದರೊಂದಿಗೆ ಕಾಂಗ್ರೆಸ್, ಜೆಡಿಎಸ್ ಎರಡೂ ಪಕ್ಷಗಳು ಮುಖಭಂಗಕ್ಕೀಡಾಗಿವೆ. ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿ ನೇತೃತ್ವದ ಎಐಎಂಐಎಂ ಪಕ್ಷ ಸ್ಪರ್ಧಿಸಿದ ನಾಲ್ಕು ಸ್ಥಾನಗಳಲ್ಲಿ ಎರಡರಲ್ಲಿ ಗೆಲುವು ಸಾಧಿಸಿದೆ.


ಈ ಬಾರಿ ಐವರು ಪಕ್ಷೇತರರು ಗೆಲ್ಲುವ ಮೂಲಕ ತಮ್ಮ ಬಲ ವೃದ್ಧಿಸಿಕೊಂಡಿದ್ದಾರೆ. 35 ಸದಸ್ಯ ಬಲದ ಪಾಲಿಕೆ ಅಧಿಕಾರಕ್ಕೆ ಏರಲು ಸರಳ ಬಹುಮತಕ್ಕೆ 18 ಸದಸ್ಯರ ಅಗತ್ಯವಿದೆ. ಪ್ರಕಟಿತ ಫಲಿತಾಂಶದಿಂದ ಬಿಜೆಪಿ ಸರಳ ಬಹುಮತದೊಂದಿಗೆ ಪಾಲಿಕೆ ಗದ್ದುಗೆ ಏರಲು ಓರ್ವ ಸದಸ್ಯರ ಬೆಂಬಲ ಬೇಕಿದೆ.

Join Whatsapp
Exit mobile version