Home ಟಾಪ್ ಸುದ್ದಿಗಳು ಕೊಡಗು: ಮೊಬೈಲ್ ಗೇಮ್ ಡಿಲೀಟ್ ಮಾಡಿದ್ದರಿಂದ ಮನನೊಂದ ಬಾಲಕಿ ಆತ್ಮಹತ್ಯೆ

ಕೊಡಗು: ಮೊಬೈಲ್ ಗೇಮ್ ಡಿಲೀಟ್ ಮಾಡಿದ್ದರಿಂದ ಮನನೊಂದ ಬಾಲಕಿ ಆತ್ಮಹತ್ಯೆ

ಮಡಿಕೇರಿ: ಮೊಬೈಲ್ ಫೋನ್ ನಿಂದ ಗೇಮ್ ಡಿಲೀಟ್ ಮಾಡಿದ್ದರಿಂದ ಮನನೊಂದ 13 ವರ್ಷದ ಬಾಲಕಿಯೊಬ್ಬಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೊಡಗು ಜಿಲ್ಲೆಯ ಹಳ್ಳಿಯೊಂದರಲ್ಲಿ ನಡೆದಿದೆ.


ಬಾಲಕಿಯು ತನ್ನ ತಂದೆಯ ಮೊಬೈಲ್ ಫೋನ್ ನಲ್ಲಿ 20ಕ್ಕೂ ಹೆಚ್ಚು ಆಟಗಳನ್ನು ಡೌನ್ ಲೋಡ್ ಮಾಡಿದ್ದಳು. ಇದನ್ನು ಗಮನಿಸಿದ ಅವಳ ತಾಯಿ, ಎಲ್ಲಾ ಆಟಗಳನ್ನು ಅವಳ ಮುಂದೆಯೇ ಅಳಿಸಿಹಾಕಿದ್ದರು. ನಂತರ, ಪೋಷಕರು ಇಬ್ಬರೂ ಎದಿನಂತೆ ಕೆಲಸಕ್ಕೆ ತೆರಳಿದ್ದರು.

ಪೋಷಕರು ಕೆಲಸ ಮುಗಿಸಿ ಮನೆಗೆ ಹಿಂದಿರುಗಿದಾಗ, ಶೌಚಾಲಯದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಮಗಳ ಮೃತದೇಹ ಕಂಡು ಬಂದಿದೆ. ಆಕೆಯನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಆಕೆ ಮೃತಪಟ್ಟಿದ್ದಾಳೆ ಎಂದು ವೈದ್ಯರು ಹೇಳಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

Join Whatsapp
Exit mobile version