ವಿಯೆನ್ನಾ: ಲಸಿಕೆ ಹಾಕಿಸಿಕೊಳ್ಳದವರಿಗೆ ಆಸ್ಟ್ರೀಯಾದಲ್ಲಿ ಲಾಕ್ ಡೌನ್ ಜಾರಿಗೊಳಿಸಲಾಗಿದೆ. ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವ ಕಾರಣ ಈ ನಿರ್ಧಾರ ಕೈಗೊಳ್ಳಲಾಗಿದೆ.
ಕೋವಿಡ್ ಲಸಿಕೆ ಹಾಕಿಸಿಕೊಳ್ಳದವರು ಕೊರೋನಾಕ್ಕೆ ತುತ್ತಾಗುವ ಸಾಧ್ಯತೆ ದಟ್ಟವಾಗಿದೆ ಎಂದು ಸರ್ಕಾರ ಹೇಳಿದೆ.
ವೃತ್ತಿ ಸಂಬಂಧಿತ ಓಡಾಟ, ದಿನಸಿ ಖರೀದಿ, ವ್ಯಾಯಾಮದ ಉದ್ದೇಶದ ವಾಕಿಂಗ್, ಲಸಿಕೆ ಪಡೆಯುವ ಉದ್ದೇಶ ಹೊರತುಪಡಿಸಿದರೆ ಬೇರೆ ಯಾವುದೇ ಉದ್ದೇಶದಲ್ಲಿ ಲಸಿಕೆ ಪಡೆಯದವರು ಓಡಾಡುವುದಕ್ಕೆ ನಿರ್ಬಂಧಿಸಲಾಗಿದೆ. ನಿಯಮ ಉಂಲ್ಲಂಘಿಸುವವರಿಗೆ ಕನಿಷ್ಠ 500 ಯೂರೋಸ್ (42 ಸಾವಿರ ರೂ.) ದಂಡ ವಿಧಿಸಲಾಗುತ್ತದೆ.