Home ಟಾಪ್ ಸುದ್ದಿಗಳು ಭುಜ ಬಲಕ್ಕಲ್ಲ, ಮಾನವೀಯತೆಗೆ ಸೆಲ್ಯುಟ್| ವೈರಲ್ ಆದ ಮಹಿಳಾ ಪೊಲೀಸ್ ಅಧಿಕಾರಿಯ ರಕ್ಷಣಾ ಕಾರ್ಯ!

ಭುಜ ಬಲಕ್ಕಲ್ಲ, ಮಾನವೀಯತೆಗೆ ಸೆಲ್ಯುಟ್| ವೈರಲ್ ಆದ ಮಹಿಳಾ ಪೊಲೀಸ್ ಅಧಿಕಾರಿಯ ರಕ್ಷಣಾ ಕಾರ್ಯ!

ಚೆನ್ನೈ: ಭಾರೀ ಮಳೆಯಲ್ಲಿ ಸಿಲುಕಿರುವ ಜನರನ್ನು ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರು ರಕ್ಷಿಸುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲಾಗಿದ್ದು, ವ್ಯಾಪಕ ಪ್ರಶಂಸೆಗೆ ಕಾರಣವಾಗಿದೆ.

ಚೆನ್ನೈನಲ್ಲಿ ಭಾರೀ ಮಳೆಗೆ ಸಿಲುಕಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದ ವ್ಯಕ್ತಿಯನ್ನು ಹೆಗಲ ಮೇಲೆ ಹೊತ್ತುಕೊಂಡು ಆಸ್ಪತ್ರೆಗೆ ಸಾಗಿಸಲು ಹರಸಾಹಸ ಪಡುತ್ತಿರುವ ಪೊಲೀಸ್ ಇನ್ಸ್ಪೆಕ್ಟರ್ ರಾಜೇಶ್ವರಿಗೆ ನೆಟ್ಟಿಗರು ಬಿಗ್ ಸೆಲ್ಯುಟ್ ಹೊಡೆದಿದ್ದಾರೆ.

ರಾಜೇಶ್ವರಿ ಅವರನ್ನು ಅಭಿನಂದಿಸಿ IAS ಅಧಿಕಾರಿಗಳು ಸೇರಿದಂತೆ ಹಲವರು ವಿಡಿಯೋ ಶೇರ್ ಮಾಡಿದ್ದಾರೆ.


ತಮಿಳುನಾಡಿನ ಉತ್ತರದ ಜಿಲ್ಲೆಗಳಾದ ಚೆನ್ನೈ, ಕಾಂಚೀಪುರಂ, ಕಡಲೂರು, ವಿಲ್ಲುಪುರಂ, ಚೆಂಗಲ್ ಪೇಟ್, ತಿರುವಳ್ಳೂರು, ರಾಣಿ ಪೆಟ್ಟಾ, ವೆಲ್ಲೂರು, ತಿರುಪತ್ತೂರು, ನಾಗಪಟ್ಟಣಂ, ಮೈಲಾಡುತುರೈ, ಕಲ್ಲ ಕುಚ್ಚಿ, ತಿರುವಣ್ಣಾಮಲೈ ಮತ್ತು ಸೇಲಂನಲ್ಲಿ ಅತಿ ಹೆಚ್ಚು ಮಳೆಯಾಗಿದೆ.


ಗುರುವಾರದಿಂದ ಶುಕ್ರವಾರದವರೆಗೆ 14 ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಮತ್ತು ಏಳು ಜಿಲ್ಲೆಗಳಲ್ಲಿ ಹಳದಿ ಅಲರ್ಟ್ ಘೋಷಿಸಲಾಗಿದೆ. ಈ ಜಿಲ್ಲೆಗಳಲ್ಲಿ ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಿಸಲಾಗಿದೆ.

Join Whatsapp
Exit mobile version