ಮಧ್ಯ ಆಫ್ರಿಕಾದಲ್ಲಿ ಬಂಧನಕ್ಕೊಳಗಾದ 16 ಭಾರತೀಯ ನಾವಿಕರು:  ಸಹಾಯಕ್ಕಾಗಿ ಅಂಗಲಾಚುತ್ತಿರುವ ವೀಡಿಯೋ ವೈರಲ್

Prasthutha|

ನವದೆಹಲಿ: ಮಧ್ಯ ಆಫ್ರಿಕಾದ ಪಶ್ಚಿಮ ಕರಾವಳಿಯ ಈಕ್ವಟೋರಿಯಲ್ ಗಿನಿಯಾದಲ್ಲಿ ಬಂಧಿತರಾಗಿರುವ ಹಡಗಿನ 26 ಸದಸ್ಯರ ತಂಡದ ಭಾಗವಾಗಿರುವ ಹದಿನಾರು ಭಾರತೀಯ ನಾವಿಕರು ಕಾನೂನುಬಾಹಿರ ಬಂಧನದಿಂದ ಬಿಡುಗಡೆ ಮಾಡಲು ಸಹಾಯಕ್ಕಾಗಿ ಮನವಿ ಮಾಡಿದ್ದಾರೆ.

- Advertisement -

ಬಂಧಿತ ನಾವಿಕರು ಸಹಾಯಕ್ಕಾಗಿ ಅಂಗಲಾಚುತ್ತಿರುವ ದೃಶ್ಯಗಳು ವೈರಲ್ ಆಗಿದ್ದು, 16 ಸಿಬ್ಬಂದಿಯನ್ನು ಕೂಡಿಹಾಕಿರುವುದು ವೀಡಿಯೋದಲ್ಲಿ ನೋಡಬಹುದು.

ಈಕ್ವಟೋರಿಯಲ್ ಗಿನಿಯಾದ ರಾಜಧಾನಿ ಮಲಬೋದ ಜೈಲಿನಲ್ಲಿ ತನ್ನನ್ನು ಒಳಗೊಂಡಂತೆ 16 ಸಿಬ್ಬಂದಿಯನ್ನು ಬಂಧಿಸಲಾಗಿದ್ದು, ಹೋಟೆಲ್ ನಲ್ಲಿ ತಂಗುವ ನೆಪದಲ್ಲಿ ಅವರನ್ನು ತಮ್ಮ ಹಡಗಿನಿಂದ ಕರೆದೊಯ್ದ ಭದ್ರತಾ ಸಿಬ್ಬಂದಿ ಸುತ್ತುವರೆದಿದ್ದಾರೆ ಎಂದು ವಿಜಿತ್ ನಾಯರ್ ಎಂಬುವವರು ವೀಡಿಯೊದಲ್ಲಿ ತಿಳಿಸಿದ್ದಾರೆ.

- Advertisement -

ಎಂಟಿ ಹೀರೊಯಿಕ್ ಇಡುನ್ ತಂಡದವರಾದ ನಾವು, ನಮ್ಮನ್ನು ಬಿಡುಗಡೆ ಮಾಡಲು ಸಹಾಯಕ್ಕಾಗಿ ವಿನಂತಿಸಲು ಬಯಸುತ್ತೇವೆ.  2022 ರ ಆಗಸ್ಟ್ 14 ರಿಂದ ನಮ್ಮನ್ನು ಕಾನೂನುಬಾಹಿರವಾಗಿ ಬಂಧಿಸಿರುವ ಈಕ್ವಟೋರಿಯಲ್ ಗಿನಿಯಾದಿಂದ ಭಾರತಕ್ಕೆ ಮರಳಿ ಕರೆ ತರಲು ಬಯಸುತ್ತೇವೆ. ಒಟ್ಟು 26 ಸಿಬ್ಬಂದಿಯಿದ್ದು, ಈ ಪೈಕಿ 16 ಭಾರತೀಯರು, 8 ಶ್ರೀಲಂಕಾದವರು, 1 ಪೋಲಿಷ್ ಮತ್ತು 1 ಫಿಲಿಪಿನೋ ಪ್ರಜೆಗಳು ಹಡಗಿನಲ್ಲಿದ್ದಾರೆ. 2022 ರ ಆಗಸ್ಟ್ 14 ರಂದು ಆದೇಶಗಳನ್ನು ಪಾಲಿಸದಿದ್ದರೆ ಹಡಗು ಮತ್ತು ಸಿಬ್ಬಂದಿಯ ವಿರುದ್ಧ ಮಾರಣಾಂತಿಕ ಕ್ರಮದ ಬೆದರಿಕೆಯೊಂದಿಗೆ ಹಡಗನ್ನು ಈಕ್ವಟೋರಿಯಲ್ ಗಿನಿಯಾದ ಲುಬಾ ಬಂದರಿಗೆ ತರಲಾಯಿತು ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಈ ವಿಷಯದಲ್ಲಿ ಮಧ್ಯಪ್ರವೇಶಿಸುವಂತೆ ಪ್ರಧಾನಿ ನರೇಂದ್ರ ಮೋದಿಯವರನ್ನು ವಿನಂತಿಸಿದ್ದಾರೆ.

Join Whatsapp
Exit mobile version