Home ಟಾಪ್ ಸುದ್ದಿಗಳು ವಿಎಚ್ ಪಿಯ ಶ್ರೀರಂಗಪಟ್ಟಣ ಚಲೋ’ಗೆ ಪೊಲೀಸರ ತಡೆ: ವಾಗ್ವಾದ, ಪ್ರಚೋದನಾಕಾರಿ ಘೋಷಣೆ

ವಿಎಚ್ ಪಿಯ ಶ್ರೀರಂಗಪಟ್ಟಣ ಚಲೋ’ಗೆ ಪೊಲೀಸರ ತಡೆ: ವಾಗ್ವಾದ, ಪ್ರಚೋದನಾಕಾರಿ ಘೋಷಣೆ

ಫೋಟೋ ಕೃಪೆ: ANI

ಮಂಡ್ಯ: ವಿಶ್ವ ಹಿಂದೂ ಪರಿಷತ್ ಕರೆಕೊಟ್ಟಿರುವ ಶ್ರೀರಂಗ ಪಟ್ಟಣ ಚಲೋ ಹಿನ್ನೆಲೆಯಲ್ಲಿ ಶ್ರೀರಂಗಪಟ್ಟಣದಾದ್ಯಂತ 144 ಸೆಕ್ಷನ್ ಜಾರಿಗೊಳಿಸಿದ್ದರೂ ಸಂಘಪರಿವಾರದ ಕಾರ್ಯಕರ್ತರು ಶನಿವಾರ ನಿಷೇಧಾಜ್ಞೆ ಉಲ್ಲಂಘಿಸಿ ಪಟ್ಟಣದಲ್ಲಿ ಮೆರವಣಿಗೆ ನಡೆಸಿ ಘೋಷಣೆ ಕೂಗಿದ ಘಟನೆ ನಡೆದಿದೆ.


ಪ್ರಚೋದನಾಕಾರಿ ಘೋಷಣೆ ಕೂಗಿದ ಕಾರ್ಯಕರ್ತರು ಶ್ರೀರಂಗಪಟ್ಟಣಕ್ಕೆ ತೆರಳಲು ಮುಂದಾಗುತ್ತಿದ್ದಂತೆ ಪೊಲೀಸರು ಮಾರ್ಗ ಮಧ್ಯೆ ಅವರನ್ನು ತಡೆದಿದ್ದು, ಈ ವೇಳೆ ಪೊಲೀಸರು ಮತ್ತು ಸಂಘಪರಿವಾರದ ಕಾರ್ಯಕರ್ತರ ನಡುವೆ ವಾಗ್ವಾದ ನಡೆಯಿತು.
ಮಂಡ್ಯ ಮಸೀದಿಯಲ್ಲಿ ದೇವರ ಕುರುಹು ಪತ್ತೆಯಾಗಿದೆ ಎಂದು ಆರೋಪಿಸಿ ಹಿಂದುತ್ವ ಪರ ಸಂಘಟನೆಗಳು ಶ್ರೀರಂಗಪಟ್ಟಣ ಚಲೋ ಹಮ್ಮಿಕೊಂಡ ಹಿನ್ನಲೆಯಲ್ಲಿ ಇಂದು ಶ್ರೀರಂಗಪಟ್ಟಣದಾದ್ಯಂತ 144 ಸೆಕ್ಷನ್ ಜಾರಿಗೊಳಿಸಲಾಗಿದೆ.


ಮಸೀದಿ ಖಾಲಿ ಮಾಡಬೇಕು, ವೀಡಿಯೊ ಸರ್ವೆ ನಡೆಸಬೇಕು , ಪೂಜೆಗೆ ಅವಕಾಶ ಕೊಡಬೇಕು ಎಂದು ಸಂಘಪರಿವಾರದ ಒತ್ತಾಯವಾಗಿದೆ. ಶ್ರೀರಂಗಪಟ್ಟಣ ಚಲೋ ಹಿನ್ನೆಲೆಯಲ್ಲಿ ಜಾಮೀಯಾ ಮಸೀದಿ ಬಳಿ ಯಾರು ಕೂಡ ಸುಳಿಯದಂತೆ ಮಸೀದಿಯ ಸುತ್ತ 600 ಮೀಟರ್ ವ್ಯಾಪ್ತಿಯಲ್ಲಿ ಕಬ್ಬಿಣದ ತಾತ್ಕಾಲಿಕ ಬೇಲಿ ನಿರ್ಮಿಸಲಾಗಿದೆ. ಎಲ್ಲೆಡೆ ಡ್ರೋನ್ ಕ್ಯಾಮರಾ ಇರಿಸಲಾಗಿದೆ. ಡಿಎಆರ್ ಮತ್ತು ಕೆಎಸ್ಆರ್ ಪಿ ತುಕಡಿಗಳನ್ನು ಮಸೀದಿಯ ಸುತ್ತ ನಿಯೋಜಿಸಲಾಗಿದೆ.

Join Whatsapp
Exit mobile version