ಶ್ರೀನಗರ: ಪಿ.ಎಂ ಕೇರ್ ನಿಧಿಯಿಂದ ಕಾಶ್ಮೀರಕ್ಕೆ ಒದಗಿಸಲಾದ ಯಾವುದೇ ವೆಂಟಿಲೇಟರ್ ಗಳು ಕಾರ್ಯನಿರ್ವಹಿಸುತ್ತಿಲ್ಲ ಎಂದು ವರದಿಯಾಗಿದೆ.
ಜಮ್ಮು ಮೂಲದ ಸ್ವಯಂಸೇವಕ ಬಲ್ವಿಂದರ್ ಸಿಂಗ್ ಸಲ್ಲಿಸಿದ RTI ಅರ್ಜಿಯಿಂದ ಈ ಮಾಹಿತಿ ಬಹಿರಂಗವಾಗಿದೆ. ಶ್ರೀನಗರದ ಶ್ರೀ ಮಹಾರಾಜ ಹರಿ ಸಿಂಗ್ ಆಸ್ಪತ್ರೆಗೆ 165 ಕೆಟ್ಟುಹೋದ ವೆಂಟಿಲೇಟರ್ ಗಳನ್ನು ಒದಗಿಸಲಾಗಿದೆ.
ಬಲ್ವಿಂದರ್ ಸಿಂಗ್ ಅವರು ಪಿಎಂ ಕೇರ್ ಬಗ್ಗೆ 15 ಪ್ರಶ್ನೆಗಳನ್ನು ಕೇಳಿದ್ದಾರೆ. ಆರ್‌ಟಿಐ ದಾಖಲೆಗಳಿಂದ ಪಡೆದ ಮಾಹಿತಿಯ ಆಧಾರದ ಮೇಲೆ ತನಿಖೆ ನಡೆಸುವಂತೆ ಸಿಂಗ್ ಜಮ್ಮು ಮತ್ತು ಕಾಶ್ಮೀರದ ಮುಖ್ಯ ನ್ಯಾಯಮೂರ್ತಿಗೆ ಪತ್ರ ಬರೆದಿದ್ದಾರೆ.
ಪಿ. ಎಂ ಕೇರ್ ಫಂಡ್ನಿಂದ ಸರಬರಾಜು ಮಾಡಿರುವ ವೆಂಟಿಲೇಟರ್ ಗಳನ್ನು ಪರಿಶೀಲಿಸಲು ತಜ್ಞರ ಸಮಿತಿಯನ್ನು ರಚಿಸಬೇಕು ಮತ್ತು ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಬಲ್ವಿಂದರ್ ಸಿಂಗ್ ಪತ್ರದಲ್ಲಿ ತಿಳಿಸಿದ್ದಾರೆ.
ಪಿ. ಎಂ ಕೇರ್ಸ್ ಫಂಡ್ ನಿಂದ 10,000 ವೆಂಟಿಲೇಟರ್ ಗಳನ್ನು ಆರ್ಡರ್ ಪಡೆದಿರುವ ಕಂಪನಿಯು ವೆಂಟಿಲೇಟರ್ ತಯಾರಿಕಾ ವಲಯದಲ್ಲಿ ಮೊದಲ ಬಾರಿಗೆ ಕಾರ್ಯನಿರ್ವಹಿಸುತ್ತಿದೆ ಎಂಬ ವರದಿಗಳು ಈಗಾಗಲೇ ವಿವಾದಕ್ಕೆ ಕಾರಣವಾಗಿತ್ತು.