Home ಟಾಪ್ ಸುದ್ದಿಗಳು ಯುಎಇ: ಕೋಮು ದ್ವೇಷ ಹರಡುವವರ ವಿರುದ್ಧ ಭಾರಿ ದಂಡ

ಯುಎಇ: ಕೋಮು ದ್ವೇಷ ಹರಡುವವರ ವಿರುದ್ಧ ಭಾರಿ ದಂಡ

ಆಬುಧಾಬಿ: ಸಮಾಜದಲ್ಲಿ ಕೋಮು ದ್ವೇಷ, ತಾರತಮ್ಯದಲ್ಲಿ ತೊಡಗಿದವರ ವಿರುದ್ಧ ಧರ್ಮನಿಂದನೆಯ ಅಪರಾಧಕ್ಕಾಗಿ ಭಾರಿ ದಂಡವನ್ನು ವಿಧಿಸಲಾಗುವುದು ಎಂದು ಯುಎಇ ಕಾನೂನು ಪ್ರಾಧಿಕಾರ ಎಚ್ಚರಿಸಿದೆ.

ಈ ಕುರಿತು ಸಾಮಾಜಿಕ ಮಾಧ್ಯಮ ಟ್ಟಿಟ್ಟರ್ ನಲ್ಲಿ ಪ್ರತಿಕ್ರಿಯಿಸಿರುವ ಸರ್ಕಾರಿ ಅಭಿಯೋಜಕರು, ಧಾರ್ಮಿಕ ದ್ವೇಷ ಹರಡುವವರ ವಿರುದ್ಧ ಶಿಕ್ಷಾರ್ಹ ಅಪರಾಧಿಗಳೆಂದು ಪರಿಗಣಿಸಲಿದೆ ಎಂದು ಸ್ಪಷ್ಟಪಡಿಸಿದೆ.

ತಾರತಮ್ಯ ಮತ್ತು ದ್ವೇಷದ ವಿರುದ್ಧ ಹೋರಾಡಲು 2015 ರ ಫೆಡರಲ್ ಕಾಯ್ದೆ ಕಲಂ ಸಂಖ್ಯೆ 2, ಆರ್ಟಿಕಲ್ 4 ಅನ್ವಯ ಧಾರ್ಮಿಕ ನಿಂದನಾ ಅಪಾರಾಧಿಗಳೆಂದು ಪರಿಗಣಿಸಲಾಗುತ್ತದೆ ಎಂದು ಸರ್ಕಾರಿ ಅಭಿಯೋಜಕರು ತಿಳಿಸಿದ್ದಾರೆ.

ಎಲ್ಲಾ ನಂಬಿಕೆಯ ಜನರಿಗೆ ಯುಎಇ ಸರ್ಕಾರ ರಕ್ಷಣೆಯನ್ನು ಖಾತ್ರಿಪಡಿಸುತ್ತದೆ ಮತ್ತು ಅದಕ್ಕೆ ಅನುಗುಣವಾಗಿ ಅಸಹಿಷ್ಣತೆ ಅಥವಾ ಧಾರ್ಮಿಕ ದ್ವೇಷದ ಕೃತ್ಯಗಳನ್ನು ಗುರುತಿಸಿ ನಿರ್ದಾಕ್ಷಿಣ್ಯವಾಗಿ ಶಿಕ್ಷಿಸುತ್ತದೆ ಎಂದು ಟ್ವೀಟ್ ಮೂಲಕ ತಿಳಿಸಿವೆ. ಆರ್ಟಿಕಲ್ 4 ಕಲಂ 1 ಮತ್ತು 4 ರಲ್ಲಿ ನಿಗದಿಪಡಿಸಿದ ಯಾವುದೇ ಕೃತ್ಯಗಳಲ್ಲಿ ಪಾಲ್ಗೊಳ್ಳುವವರಿಗೆ ಏಳು ವರ್ಷದ ಜೈಲು ಮತ್ತು 5,00,000 (2 ಮಿಲಿಯನ್ ದಿರ್ಹಮ್) ರೂಪಾಯಿ ದಂಡ ವಿಧಿಸಲಾಗುತ್ತದೆ ಎಂದು ಎಚ್ಚರಿಸಿದೆ.

Join Whatsapp
Exit mobile version