ವಾರಣಾಸಿ: ಕೋರ್ಟ್ ನೇಮಿಸಿದ ಸಮೀಕ್ಷಾ ಆಯೋಗದಿಂದ ತೆಗೆದ ಜ್ಞಾನವಾಪಿ ಮಸೀದಿಯ ಫೋಟೋ,ವೀಡಿಯೋಗಳನ್ನು ತನ್ನ ಒಪ್ಪಿಗೆಯಿಲ್ಲದೆ ಯಾವುದೇ ಕಾರಣಕ್ಕೂ ಬಹಿರಂಗಪಡಿಸುವಂತಿಲ್ಲ ಎಂದು ವಾರಣಾಸಿ ಕೋರ್ಟ್ ತನ್ನ ಆದೇಶದಲ್ಲಿ ಉಲ್ಲೇಖಿಸಿದೆ.
ಮಸೀದಿ ಒಳಗಿನ ಚಿತ್ರ,ವೀಡಿಯೋಗಳನ್ನು ನೀಡಬೇಕೆಂದು ಕೋರಿ ಐವರು ಮಹಿಳೆಯರು ಮೇಲ್ಮನವಿ ಅರ್ಜಿ ಸಲ್ಲಿಸಿದ್ದರು. ಇದಕ್ಕೆ ಮಸೀದಿ ಆಡಳಿತ ಸಮಿತಿ ವಿರೋಧ ವ್ಯಕ್ತಪಡಿಸಿತ್ತು.
ಈ ಅರ್ಜಿಯ ವಿಚಾರಣೆಯನ್ನು ಕೈಗೆತ್ತಿಕೊಂಡ ನ್ಯಾಯಪೀಠ, ಸಮೀಕ್ಷೆಯ ವೇಳೆ ತೆಗೆದ ಫೋಟೋ, ವೀಡಿಯೋ ವಿವಾದದ ಕುರಿತು ಆಕ್ಷೇಪಗಳೇನಾದರೂ ಇದ್ದರೆ ತಿಳಿಸಬಹುದು ಮತ್ತು ತನ್ನ ಅನುಮತಿಯಿಲ್ಲದೆ ಅದನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಲು ಸಾಧ್ಯವಿಲ್ಲವೆಂದು ನ್ಯಾಯಾಲಯ ತಿಳಿಸಿದೆ. ಈ ಕುರಿತು ಉಭಯ ಕಡೆಯವರೂ ಲಿಖಿತ ರೂಪರಲ್ಲಿ ಹೇಳಿಕೆ ನೀಡಬೇಕೆಂದು ಆದೇಶಿಸಿದೆ.