Home ಟಾಪ್ ಸುದ್ದಿಗಳು ಹಸುವಿಗೆ ಡಿಕ್ಕಿ ಹೊಡೆದು ಮತ್ತೆ ನಜ್ಜುಗುಜ್ಜಾದ ವಂದೇ ಭಾರತ್ ಎಕ್ಸ್ ಪ್ರೆಸ್

ಹಸುವಿಗೆ ಡಿಕ್ಕಿ ಹೊಡೆದು ಮತ್ತೆ ನಜ್ಜುಗುಜ್ಜಾದ ವಂದೇ ಭಾರತ್ ಎಕ್ಸ್ ಪ್ರೆಸ್

ನವದೆಹಲಿ: ದೇಶದ ಅತ್ಯಂತ ವೇಗದ ರೈಲು ಎಂದು ಹೇಳಲಾಗುತ್ತಿರುವ ವಂದೇ ಭಾರತ್ ಎಕ್ಸ್ ಪ್ರೆಸ್ ಶನಿವಾರ ಬೆಳಿಗ್ಗೆ ಮತ್ತೆ ಅಪಘಾತಗೊಂಡು ನಜ್ಜುಗುಜ್ಜಾಗಿದೆ. ಮುಂಬೈನಿಂದ ಅಹ್ಮದಾಬಾದ್ ಗೆ ಹೋಗುತ್ತಿದ್ದ ವೇಳೆ ರೈಲಿನ ಮುಂದೆ ಹಸು ಬಂದಾಗ ಗುಜರಾತ್ ನಲ್ಲಿ ಈ ಅಪಘಾತ ಸಂಭವಿಸಿದೆ. ರೈಲಿನ ಮುಂಭಾಗದ ಭಾಗವು ಜಖಂಗೊಂಡಿದೆ.

ಪಶ್ಚಿಮ ರೈಲ್ವೆಯ ಮುಖ್ಯ ಪಿಆರ್ಒ ಸುಮಿತ್ ಠಾಕೂರ್ ಹೇಳಿಕೆಯೊಂದರಲ್ಲಿ, “ಮುಂಬೈ ಕೇಂದ್ರ ವಿಭಾಗದ ಅತುಲ್ ಬಳಿ ವಂದೇ ಭಾರತ್ ರೈಲನ್ನು ಹಾದುಹೋಗುವಾಗ ಜಾನುವಾರು ಓಡುವ ಘಟನೆ ಸಂಭವಿಸಿದೆ, ಅದರಲ್ಲಿ ಒಂದು ಎತ್ತುಗೆ ಹೊಡೆದಿದೆ. ಈ ರೈಲು ಮುಂಬೈ ಸೆಂಟ್ರಲ್ ನಿಂದ ಗಾಂಧಿನಗರಕ್ಕೆ ಪ್ರಯಾಣಿಸುತ್ತಿತ್ತು ಎಂದ್ದಿದ್ದಾರೆ.

ಅತಿ ವೇಗದಲ್ಲಿ ಬರುತ್ತಿದ್ದ ವಂದೇ ಭಾರತ್ ರೈಲಿಗೆ ಹಸು ಡಿಕ್ಕಿ ಹೊಡೆದ ಪರಿಣಾಮ ಈ ಘಟನೆ ನಡೆದಿದೆ, ಇದರಿಂದ ಯಾವುದೇ ದೊಡ್ಡ ಅನಾಹುತ ಸಂಭವಿಸಿಲ್ಲ. ರೈಲಿನಲ್ಲಿದ್ದ ಎಲ್ಲ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ. ಈ ಘಟನೆಯ ಬಳಿಕ ರೈಲು ಕೆಲಕಾಲ ಅದೇ ಸ್ಥಳದಲ್ಲಿ ನಿಂತಿತ್ತು. ಸ್ವಲ್ಪ ಸಮಯದ ನಂತರ ರೈಲನ್ನು ಮುಂದಕ್ಕೆ ಕಳುಹಿಸಲಾಯಿತು.

Join Whatsapp
Exit mobile version