Home ಕರಾವಳಿ ಮಂಜೇಶ್ವರ: ಅಗತ್ಯ ವಸ್ತುಗಳ ಬೆಲೆ ಏರಿಕೆ ವಿರೋಧಿಸಿ ಎಸ್.ಡಿ.ಪಿ.ಐ ಧರಣಿ

ಮಂಜೇಶ್ವರ: ಅಗತ್ಯ ವಸ್ತುಗಳ ಬೆಲೆ ಏರಿಕೆ ವಿರೋಧಿಸಿ ಎಸ್.ಡಿ.ಪಿ.ಐ ಧರಣಿ

ಮಂಜೇಶ್ವರಂ: ದಿನಬಳಕೆಯ ವಸ್ತುಗಳ ಬೆಲೆ ಏರಿಕೆ ವಿರೋಧಿಸಿ ಎಸ್ ಡಿಪಿಐ ವತಿಯಿಂದ ಮಜೀರ್‌ಪಳ್ಳದಲ್ಲಿ ಧರಣಿ ನಡೆಸಲಾಯಿತು.

ಸರಕಾರ ಮತ್ತು ಮಧ್ಯವರ್ತಿಗಳ ನಡುವಿನ ಒಪ್ಪಂದವೇ ಬೆಲೆ ಏರಿಕೆಗೆ ಕಾರಣ. ಜನರನ್ನು ಸಂಕಷ್ಟಕ್ಕೆ ಸಿಲುಕಿಸಿ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಜೇಬು ತುಂಬಿಸಿಕೊಳ್ಳುವುದನ್ನು ತಡೆಯಬೇಕೆಂದು ಎಸ್ ಡಿ ಪಿ ಐ ಜಿಲ್ಲಾ ಕಾರ್ಯದರ್ಶಿ ಸವಾದ್ ಸಿಎ ಆಗ್ರಹಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್ ಡಿ ಪಿ ಐ ಮಂಜೇಶ್ವರಂ ಕ್ಷೇತ್ರದ ಅಧ್ಯಕ್ಷ ಅಶ್ರಫ್ ಬಡಾಜೆ ವಹಿಸಿದ್ದು, ಶರೀಫ್ ಪಾವೂರು, ಇಬ್ರಾಹಿಂ ವೊರ್ಕಾಡಿ, ಮಜೀದ್ ವೊರ್ಕಾಡಿ, ನಾಸರ್ ಬಂಬ್ರಾಣ, ಅಶ್ರಫ್ ಅಝ್ಹರಿ ಮಾತನಾಡಿದರು. ಕ್ಷೇತ್ರ ಕಾರ್ಯದರ್ಶಿ ಆರಿಫ್ ಖಾದರ್ ಸ್ವಾಗತಿಸಿ, ನೌಫಲ್ ಮಿಯಾಪದವ್ ವಂದಿಸಿದರು.

Join Whatsapp
Exit mobile version