Home ಟಾಪ್ ಸುದ್ದಿಗಳು ವಾಲ್ಮೀಕಿ ಹಗರಣ: ಶಾಸಕ ಬಸನಗೌಡ ದದ್ದಲ್ ಮಾಜಿ ಪಿಎ ಪಂಪಣ್ಣ ಇಡಿ ವಶಕ್ಕೆ

ವಾಲ್ಮೀಕಿ ಹಗರಣ: ಶಾಸಕ ಬಸನಗೌಡ ದದ್ದಲ್ ಮಾಜಿ ಪಿಎ ಪಂಪಣ್ಣ ಇಡಿ ವಶಕ್ಕೆ

ರಾಯಚೂರು: ಕರ್ನಾಟಕ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದ ಬಹುಕೋಟಿ ಹಗರಣ ಸಂಬಂಧ ಕಾಂಗ್ರೆಸ್ ಶಾಸಕನ ಮಾಜಿ ಆಪ್ತ ಸಹಾಯಕನನ್ನು ಇಡಿ ವಶಕ್ಕೆ ಪಡೆದುಕೊಂಡಿದೆ.

ರಾಯಚೂರು ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಶಾಸಕ, ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿರುವ ಬಸಗೌಡ ದದ್ದಲ್ ಮಾಜಿ ಆಪ್ತ ಸಹಾಯಕ(ಪಿಎ) ಪಂಪಣ್ಣನನ್ನು ಇಡಿ ಅಧಿಕಾರಿಗಳು ಇಂದು (ಜುಲೈ 11) ವಶಕ್ಕೆ ಪಡೆದುಕೊಂಡಿದ್ದಾರೆ. ಬಸನಗೌಡ ದದ್ದಲ್ ನಿವಾಸದ ಮೇಲೆ ದಾಳಿ ಮಾಡಿದ ಬಳಿಕ ಅವರ ಮಾಜಿ ಆಪ್ತ ಸಹಾಯಕರಾಗಿದ್ದ ಪಂಪಣ್ಣ ನಿವಾಸದ ಮೇಲೂ ಇಡಿ ಅಧಿಕಾರಿಗಳು ದಾಳಿ ಮಾಡಿದ್ದರು. ನಿನ್ನೆಯಿಂದಲೇ ಪಂಪಣ್ಣ ನಿವಾಸದಲ್ಲಿ ದಾಖಲೆಗಳನ್ನು ಪರಿಶೀನಲೆ ನಡೆಸಿದ್ದಾರೆ.

ಆದ್ರೆ, ಬೇರೆ ದಾಖಲೆಗಳು ಪತ್ತೆಯಾಗಿದ್ದರಿಂದ ಸುದೀರ್ಘ 24 ಗಂಟೆಗಳ ಪರಿಶೀಲನೆ ನಂತರ ರಾಯಚೂರಿನ ರಾಯಲ್ಫೋರ್ಟ್ ಅಪಾರ್ಟ್ಮೆಂಟ್ನಲ್ಲಿ ಪಂಪಣ್ಣನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಬಳಿಕ 2 ಬ್ಯಾಗ್ ದಾಖಲೆ ಸಮೇತ ಪಂಪಣ್ಣನನ್ನು ರಾಯಚೂರಿನ ಆಶಾಪುರ ರಸ್ತೆಯಲ್ಲಿರುವ ಬಸನಗೌಡ ದದ್ದಲ್ ನಿವಾಸಕ್ಕೆ ಕರೆದೊಯ್ದಿದ್ದಾರೆ.

Join Whatsapp
Exit mobile version