ಉತ್ತರಾಖಂಡ: ಉತ್ತರಾಖಂಡದ ಹಲ್ದ್ವಾನಿಯಲ್ಲಿ ಅಧಿಕಾರಿಗಳು ಕಾನೂನುಬಾಹಿರ ಎಂದು ಘೋಷಿಸಿದ ಮದರಸಾವನ್ನು ನೆಲಸಮಗೊಳಿಸಲು ಹೋದಾಗ ಘರ್ಷಣೆಯುಂಟಾಗಿದೆ. 50ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಈ ಪ್ರದೇಶದಲ್ಲಿ ಶೂಟ್-ಎಟ್-ಸೈಟ್ ಆದೇಶಗಳನ್ನ ಹೊರಡಿಸಲಾಗಿದೆ ಮತ್ತು ಭದ್ರತೆಯನ್ನ ಬಲಪಡಿಸಲಾಗಿದೆ.
ಎಂದು ವರದಿಯಾಗಿದೆ.
ಪೊಲೀಸರು ಮತ್ತು ಅಧಿಕಾರಿಗಳ ತಂಡವು ಪಕ್ಕದ ಪ್ರಾರ್ಥನಾ ಪ್ರದೇಶವನ್ನು ಹೊಂದಿರುವ ಮದರಸಾ ಧ್ವಂಸಕ್ಕೆ ಹೋಗಿತ್ತು. ಜೆಸಿಬಿ ಯಂತ್ರವು ಚಲಿಸಲು ಪ್ರಾರಂಭಿಸಿದಾಗ ಘರ್ಷಣೆ ನಡೆದಿದೆ ಎನ್ನಲಾಗಿದೆ.
ಪೊಲೀಸರು, ಅಧಿಕಾರಿಗಳು ನಾಗರಿಕರು ಮತ್ತು ಪತ್ರಕರ್ತರು ಗಾಯಗೊಂಡಿದ್ದಾರೆ ಎಂದು ವರದಿಯಾಗಿವೆ