Home ಟಾಪ್ ಸುದ್ದಿಗಳು ಫೇಸ್‌ಬುಕ್‌ ಲೈವ್‌ ವೇಳೆ ಶಿವಸೇನೆ ನಾಯಕನ ಮೇಲೆ ಗುಂಡು ಹಾರಿಸಿ ಹತ್ಯೆ!

ಫೇಸ್‌ಬುಕ್‌ ಲೈವ್‌ ವೇಳೆ ಶಿವಸೇನೆ ನಾಯಕನ ಮೇಲೆ ಗುಂಡು ಹಾರಿಸಿ ಹತ್ಯೆ!

ಮುಂಬೈ: ಮುಂಬೈನ ದಹಿಸರ್ ಪ್ರದೇಶದಲ್ಲಿ ಶಿವಸೇನೆ (ಯುಬಿಟಿ) ಮುಖಂಡನೊಬ್ಬನನ್ನು ಫೇಸ್‌ಬುಕ್ ಲೈವ್‌ಸ್ಟ್ರೀಮ್ ಮಾಡುತ್ತಿದ್ದಾಗಲೇ ಗುಂಡು ಹಾರಿಸಿ ಕೊಲೆ ಮಾಡಲಾದ ಆಘಾತಕಾರಿ ಘಟನೆ ನಡೆದಿದೆ. ಬಳಿಕ ಕೊಲೆಗಾರ ಆತ್ಮಹತ್ಯೆ ಮಾಡಿದ್ದಾನೆ ಎಂದು ವರದಿಯಾಗಿದೆ.

ಪ್ರಾಥಮಿಕ ಮಾಹಿತಿಯ ಪ್ರಕಾರ, ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ ಬಣದ ನಾಯಕ ಹಾಗೂ ಮಾಜಿ ಕಾರ್ಪೊರೇಟರ್ ವಿನೋದ್ ಘೋಸಲ್ಕರ್ ಅವರ ಪುತ್ರ ಅಭಿಷೇಕ್ ಘೋಸಲ್ಕರ್ ಕೊಲೆಗೀಡಾದ ವ್ಯಕ್ತಿ. ಅವರು ಮಾರಿಸ್ ನೊರೊನ್ಹಾ ಎಂಬವರೊಂದಿಗೆ ಫೇಸ್‌ಬುಕ್ ಲೈವ್‌ಸ್ಟ್ರೀಮ್ ಮಾಡುತ್ತಿದ್ದರು.

ಅಭಿಷೇಕ್ ಘೋಸಲ್ಕರ್ ಜೊತೆಗೆ ಲೈವ್ ಸ್ಟ್ರೀಮ್‌ನಲ್ಲಿ ಜೊತೆಗಿದ್ದ ಮಾರಿಸ್ ನೊರೊನ್ಹಾ ಒಮ್ಮೆಲೆ ಲೈವ್‌ಸ್ಟ್ರೀಮ್ ಅನ್ನು ತೊರೆದು, ನಂತರ ಘೋಸಲ್ಕರ್ ಮೇಲೆ ಮೂರು ಬಾರಿ ಗುಂಡು ಹಾರಿಸಿದ್ದಾನೆ. ಇದಾದ ನಂತರ ಮಾರಿಸ್ ಭಾಯ್ ತನಗೇ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೈದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಫೇಸ್‌ಬುಕ್ ಲೈವ್‌ನ ಚಿತ್ರೀಕರಣದ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ.

ಘೋಸಲ್ಕರ್ ಮತ್ತು ಅವರ ಮೇಲೆ ಗುಂಡಿನ ದಾಳಿ ನಡೆಸಿದ ವ್ಯಕ್ತಿ ಇಬ್ಬರು ಮೃತಪಟ್ಟಿದ್ದಾರೆ. ಮುಂಬೈನ ದಹಿಸರ್ ಪ್ರದೇಶದ ಎಂಎಚ್‌ಬಿ ಕಾಲೋನಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮಾರಿಸ್ ಭಾಯ್’ ಎಂದು ಜನಪ್ರಿಯವಾಗಿ ಕರೆಯಲಾಗುವ ಮಾರಿಸ್ ನೊರೊನ್ಹಾ ಕಚೇರಿಗೆ ಅಭಿಷೇಕ್ ಘೋಸಲ್ಕರ್ ಹೋಗಿದ್ದರು. ಈ ವೇಳೆ, ಗುಂಡಿನ ದಾಳಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಭಿಷೇಕ್ ಘೋಸಲ್ಕರ್ ಅವರನ್ನು ಕರುಣಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಅಭಿಷೇಕ್ ಘೋಸಲ್ಕರ್‌ಗೆ ಗುಂಡು ಹಾರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೆಲವು ಭಿನ್ನಾಭಿಪ್ರಾಯಗಳ ನಂತರ ಇಬ್ಬರು ಇತ್ತೀಚೆಗೆ ಹೊಂದಾಣಿಕೆ ಮಾಡಿಕೊಂಡಿದ್ದರು. ವೆಬ್‌ಕಾಸ್ಟ್ ಆಗುತ್ತಿರುವ ಕಾರ್ಯಕ್ರಮಕ್ಕಾಗಿ ಅಭಿಷೇಕ್ ಘೋಸಲ್ಕರ್ ಅವರನ್ನು ಮಾರಿಸ್ ಕಚೇರಿಗೆ ಆಹ್ವಾನಿಸಲಾಗಿತ್ತು. ಈ ವೇಳೆ ಮಾರಿಸ್ ಅಭಿಷೇಕದ ಮೇಲೆ ಗುಂಡು ಹೊಡೆದು ಸಾಯಿಸಿ ಆತ್ಮಹತ್ಯೆಗೈದಿದ್ದಾನೆ. ಆದರೆ, ಗುಂಡಿನ ದಾಳಿಯ ಹಿಂದಿನ ಕಾರಣ ಏನು ಎಂಬುದು ಪತ್ತೆಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ ಎಂದು ವರದಿಯಾಗಿದೆ.

https://twitter.com/i/status/1755631419433644300
Join Whatsapp
Exit mobile version