ಡೆಹ್ರಾಡೂನ್: ಸೀಮಿತ ಯಾತ್ರಿಕರೊಂದಿಗೆ ಚಾರ್‌ಧಾಮ್ ಯಾತ್ರೆಗೆ ಅನುಮತಿ ನೀಡಿದ್ದ ಉತ್ತರಾಖಂಡ ರಾಜ್ಯ ಸಚಿವ ಸಂಪುಟದ ನಿರ್ಧಾರಕ್ಕೆ ಅಲ್ಲಿನ ಹೈಕೋಟ್ ತಡೆಯಾಜ್ಞೆ ಹೇರಿದೆ.
ಅಲ್ಲದೆ ನಾಲ್ಕೂ ದೇಗುಲಗಳಲ್ಲಿ ನಡೆಯುವ ಪೂಜೆ-ಪುನಸ್ಕಾರಗಳನ್ನು ನೇರ ಪ್ರಸಾರ ಮಾಡುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಿದೆ.
ಉತ್ತರಾಖಂಡದ ಬಿಜೆಪಿ ಸರ್ಕಾರವು ಚಾರ್‌ಧಾಮ್ ದೇಗುಲಗಳಿರುವ ಪ್ರದೇಶಗಳಲ್ಲಿ ಸೀಮಿತ ಯಾತ್ರಿಕರೊಂದಿಗೆ ಜು. 1ರಿಂದ ಪ್ರವೇಶ ನೀಡಲು ಮುಂದಾಗಿತ್ತು. ಆದರೆ, ಕೊರೊನಾ ಹಿನ್ನೆಲೆಯಲ್ಲಿ ರಾಜ್ಯ ಸರಿಯಾದ ಸಿದ್ಧತೆ ಮಾಡಿಕೊಂಡಿಲ್ಲ ಎಂಬ ಕಾರಣಕ್ಕೆ ಕೋರ್ಟ್ ಈ ನಿರ್ದೇಶನ ನೀಡಿದೆ.