Home ಕರಾವಳಿ ಕೇರಳಿಗರು ದಕ್ಷಿಣಕನ್ನಡ ಪ್ರವೇಶಕ್ಕೆ ಆರ್‌ಟಿಪಿಸಿಆರ್ ನೆಗೆಟಿವ್ ಕಡ್ಡಾಯ: ಜಿಲ್ಲಾಧಿಕಾರಿ ಆದೇಶ

ಕೇರಳಿಗರು ದಕ್ಷಿಣಕನ್ನಡ ಪ್ರವೇಶಕ್ಕೆ ಆರ್‌ಟಿಪಿಸಿಆರ್ ನೆಗೆಟಿವ್ ಕಡ್ಡಾಯ: ಜಿಲ್ಲಾಧಿಕಾರಿ ಆದೇಶ

ಮಂಗಳೂರು: ಕೇರಳಿಗರು ದಕ್ಷಿಣಕನ್ನಡ ಪ್ರವೇಶಿಸಬೇಕಾದರೆ ಕಡ್ಡಾಯವಾಗಿ ಆರ್‌ಟಿಪಿಸಿಆರ್ ನೆಗೆಟಿವ್ ವರದಿ ಹೊಂದಿರಬೇಕೆಂದು ದ.ಕ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ ವಿ ಆದೇಶಿದ್ದಾರೆ. ಕೇರಳ ಭಾಗದಲ್ಲಿ ಕೋವಿಡ್ ಪ್ರಕರಣ ಹೆಚ್ಚಾಗುತ್ತಿರುವುದರೊಂದಿಗೆ ಡೆಲ್ಟಾ ಸೋಂಕು ಹರಡುವ ಹಿನ್ನೆಲೆಯಲ್ಲಿ ಕೇರಳ ಗಡಿ ಭಾಗ ಪ್ರದೇಶದಲ್ಲಿ ಕಟ್ಟೆಚ್ಚರ ವಹಿಸಬೇಕೆಂದು ರಾಜ್ಯ ಸರ್ಕಾರದ ನಿರ್ದೇಶನ ಆಧಾರದಲ್ಲಿ ಅವರು ಸೂಚಿಸಿದ್ದಾರೆ.

ಇನ್ನೂ ಕಾಸರಗೋಡು ಮಂಗಳೂರು ಸಂಚಾರ ಹೆಚ್ಚಿರುವ ಹಿನ್ನೆಲೆಯಲ್ಲಿ ತಲಪಾಡಿ, ನೆಟ್ಟನಿಕೆ ಮುನ್ನೂರು, ಸಾರಡ್ಕ, ಜಾಲ್ಸೂರ್ ಚೆಕ್ ಪೋಸ್ಟ್ ನಲ್ಲಿ ಭದ್ರತೆಯನ್ನು ಬಿಗಿಗೊಳಿಸಿ ಇನ್ನಿತರ ಗ್ರಾಮಗಳಲ್ಲಿ ಜನ ಸಂಚಾರವಿರುವಲ್ಲಿ ಹೆಚ್ಚಿನ ಚೆಕ್ ಪೋಸ್ಟ್ ನಿರ್ಮಸಿ ಕೇರಳ ದ.ಕ ಜಿಲ್ಲೆ ಗಡಿ ಪ್ರದೇಶದ ಚೆಕ್ ಪೋಸ್ಟ್ ಗಳಲ್ಲಿ ಆರ್‌ಟಿಪಿಸಿಆರ್ ಟೆಸ್ಟ್ ವ್ಯವಸ್ಥೆ ಮಾಡಬೇಕೆಂದು ಆದೇಶಿಸಿದ್ದಾರೆ.

ಇನ್ನು ಕೇರಳದಲ್ಲಿ ಪಾಸಿಟಿವಿಟಿ ಸಂಖ್ಯೆ 10 ಕ್ಕೂ ಅಧಿಕ ಇರುವುದರಿಂದ ಜಿಲ್ಲೆಯಿಂದ ಕೇರಳಕ್ಕೆ ಅನಗತ್ಯ ಸಂಚಾರ ಮಾಡದಂತೆ ಜಿಲ್ಲಾಧಿಕಾರಿ ಮನವಿ ಮಾಡಿದ್ದಾರೆ.

Join Whatsapp
Exit mobile version