Home ಟಾಪ್ ಸುದ್ದಿಗಳು ಉತ್ತರ ಪ್ರದೇಶ: ಮಾಯಾವತಿ ಯುಗಾಂತ್ಯ

ಉತ್ತರ ಪ್ರದೇಶ: ಮಾಯಾವತಿ ಯುಗಾಂತ್ಯ

ಲಕ್ನೋ: ಒಂದು ಕಾಲದಲ್ಲಿ ಉತ್ತರ ಪ್ರದೇಶದ ಪ್ರಬಲ ಪಕ್ಷವಾಗಿದ್ದ ಬಹುಜನ ಸಮಾಜವಾದಿ ಪಕ್ಷ ಈ ಸಲದ ಲೋಕಸಭಾ ಚುನಾವಣೆಯಲ್ಲಿ ಹೇಳ ಹೆಸರಿಲ್ಲದಂತಾಗಿದೆ. ಎಷ್ಟೆಂದರೆ, ಯುಪಿಯಲ್ಲಿ ಸ್ಪರ್ಧೆ ಮಾಡಿದ್ದ 79 ಕ್ಷೇತ್ರಗಳಲ್ಲಿಯೂ ಮಕಾಡೆ ಮಲಗಿದೆ. ದೇಶಾದ್ಯಂತ 424 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದರೂ ಒಂದರಲ್ಲೂ ಮುನ್ನಡೆ ಸಾಧಿಸಿಲ್ಲ.

ಉತ್ತರ ಪ್ರದೇಶದಲ್ಲಿ ಬಿಜೆಪಿ 33, ಸಮಾಜವಾದಿ ಪಕ್ಷ 37, ಕಾಂಗ್ರೆಸ್​ 6 , ಆರ್​ಎಲ್​ಡಿ 2 ಹಾಗೂ ಇತರರು 2 ಕ್ಷೇತ್ರಗಳಲ್ಲಿ ಗೆಲುವು ದಕ್ಕಿಸಿಕೊಂಡಿವೆ. ಒಂದೂ ಸ್ಥಾನವನ್ನು ಗೆಲ್ಲದ ಕಾರಣ ಬಿಎಸ್​ಪಿ ಯುಗ ಅಂತ್ಯವಾಯಿತು ಎನ್ನಲಾಗುತ್ತಿದೆ. ಗಮನಾರ್ಹ ವಿಚಾರವೇನೆಂದರೆ, ಆ ಸ್ಥಾನಕ್ಕೆ ಮತ್ತೊಬ್ಬ ದಲಿತ ನಾಯಕ ಚಂದ್ರಶೇಖರ್ ಆಜಾದ್ ಆಗಮಿಸಿದ್ದಾರೆ. ಸ್ವತಂತ್ರವಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದಾರೆ.ಉತ್ತರ ಪ್ರದೇಶದ ನಗೀನಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಸೋಲಿಸಿ ಗೆಲುವು ದಾಖಲಿಸಿದ್ದಾರೆ.

ಆಜಾದ್ ಸಮಾಜ ಪಕ್ಷದ (ಕಾನ್ಶಿ ರಾಮ್) ಚಂದ್ರಶೇಖರ್ ಆಜಾದ್ ಯಾವುದೇ ರಾಜಕೀಯ ಪಕ್ಷ ಅಥವಾ ನಾಯಕರ ಬೆಂಬಲವಿಲ್ಲದೆ ನಾಗಿನಾ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದು, ಅವರು ಹೊಸ ದಲಿತ ನಾಯಕನಾಗಿ ಹೊರಹೊಮ್ಮಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.

Join Whatsapp
Exit mobile version